ತುಮಕೂರು :ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳು ಲಿಂಗೈಕ್ಯರಾಗಿ ಮೂರು ವರ್ಷಗಳು ಕಳೆಯುತ್ತಾ ಬಂದಿವೆ. ಆಕಳ ಕರುವೊಂದು ಮಠದ ಆವರಣದಲ್ಲಿ ಇರಿಸಲಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಎದುರು ತದೇಕಚಿತ್ತದಿಂದ ಸುಮಾರು 15 ನಿಮಿಷಗಳ ಕಾಲ ನಿಂತು ಗೌರವ ಸಲ್ಲಿಸಿದ ಘಟನೆ ನಡೆದಿದೆ.
Video.. ಶಿವಕುಮಾರ ಶ್ರೀಗಳ ಭಾವಚಿತ್ರದ ಮುಂದೆ ನಿಂತು ಗೌರವ ಸಲ್ಲಿಸಿದ ಕರು - ತುಮಕೂರು ಸಿದ್ಧಗಂಗಾ ಮಠ
ಮಠದ ಆಕಳ ಕರು ಮಠದ ಆವರಣದಲ್ಲಿ ಇರಿಸಲಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಎದುರು ತದೇಕಚಿತ್ತದಿಂದ ಸುಮಾರು 15 ನಿಮಿಷಗಳ ಕಾಲ ನಿಂತು ಗೌರವ ಸಲ್ಲಿಸಿದ ಘಟನೆ ಸಿದ್ಧಗಂಗಾ ಮಠದಲ್ಲಿ ನಡೆದಿದೆ.
ಆಕಳ ಕರು
ಭಕ್ತರೊಬ್ಬರು ಮಠಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಬೃಹತ್ ಭಾವಚಿತ್ರವನ್ನು ದೇಣಿಗೆಯಾಗಿ ನೀಡಿದ್ದರು. ಈ ಫೋಟೋವನ್ನು ಮಠದ ಆವರಣದಲ್ಲಿ ಇರಿಸಲಾಗಿದೆ. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಬಂದ ಕರುವೊಂದು ಸ್ವಾಮೀಜಿಯವರ ಫೋಟೋ ಮುಂದೆ ನಿಂತು ಶ್ರೀಗಳಿಗೆ ನಮನ ಸಲ್ಲಿಸಿದೆ. ಈ ದೃಶ್ಯ ಕಂಡು ಭಕ್ತರು ಮೂಕವಿಸ್ಮಿತರಾಗಿದ್ದಾರೆ.