ತುಮಕೂರು: ಕಾಡುಮೊಲ ಬೇಟೆಯಾಡಿ ಮಾಂಸವನ್ನಾಗಿ ಮಾಡಿರುವ ವಿಡಿಯೋವನ್ನು ಟಿಕ್ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಡುಮೊಲ ಕೊಂದು ಟಿಕ್ಟಾಕ್: ವಿಡಿಯೋ ಮಾಡಿದ್ದ ಇಬ್ಬರ ಬಂಧನ - ಕಾಡುಮೊಲ ಕೊಂದ ಟಿಕ್ಟಾಕ್ ವಿಡಿಯೋ
ವನ್ಯಜೀವಿಯಾಗಿರುವ ಕಾಡುಮೊಲವನ್ನು ಬೇಟೆಯಾಡಿ ಟಿಕ್ಟಾಕ್ ಮಾಡಿರುವ ಇಬ್ಬರನ್ನು ಬಂಧಿಸಲಾಗಿದೆ.
ಇಬ್ಬರ ಬಂಧನ
ಕರಿದುಗ್ಗನಹಳ್ಳಿಯ ವಿನಯ್, ಎಸ್.ಗೊಲ್ಲಹಳ್ಳಿಯ ಜಿ.ಪಿ.ವಿನಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ವನ್ಯಜೀವಿಯಾಗಿರುವ ಕಾಡು ಮೊಲವನ್ನು ಬೇಟೆಯಾಡಿ ಚರ್ಮವನ್ನು ಸುಲಿದು ಮಾಂಸವನ್ನಾಗಿ ಮಾಡಿದ್ದರು. ಇದರ ಟಿಕ್ಟಾಕ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಇಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಉಪ -ಅರಣ್ಯ ಸಂರಕ್ಷಣಾಧಿಕಾರಿ ಎಚ್.ಸಿ.ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.