ತುಮಕೂರು: ರೋಗಿ ಸಂಖ್ಯೆ 447 ವಾಸವಿದ್ದ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದ್ದು, ಇಲ್ಲಿ 452 ಮನೆಗಳಿವೆ. ಒಟ್ಟು 1,900ಕ್ಕೂ ಹೆಚ್ಚು ಜನರು ವಾಸವಿದ್ದಾರೆ . ಇಲ್ಲಿಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದಿಂದ ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ತುಮಕೂರಲ್ಲಿ ಕೊರೊನಾ ಸೋಂಕಿತ ವಾಸವಿದ್ದ ಪ್ರದೇಶ ಈಗ ಕಂಟೈನ್ಮೆಂಟ್ ಝೋನ್ - ಲಾಕ್ಡೌನ್ ಸುದ್ದಿ
ರೋಗಿ ಸಂಖ್ಯೆ 447 ವಾಸವಿದ್ದ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ರಂಜಾನ್ ಉಪವಾಸದ ವೇಳೆ ಜನರಿಗೆ ಕಷ್ಟವಾಗಬಹುದು. ಕೋವಿಡ್-19 ತೊಲಗಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಂಟೈನ್ಮೆಂಟ್ ಝೋನ್ ಪ್ರದೇಶದಲ್ಲಿ ರಂಜಾನ್ ಉಪವಾಸದ ವೇಳೆ ಜನರಿಗೆ ಕಷ್ಟವಾಗಬಹುದು. ಆದರೆ ಕೋವಿಡ್-19 ತೊಲಗಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಅಲ್ಲದೆ, ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ 1 ಕಿ.ಮೀ. ಪ್ರದೇಶವನ್ನು ಇಂಟೆನ್ಸಿವ್ ಬಫರ್ ಝೋನ್ ಎಂದು ಪರಿಗಣಿಸಲಾಗಿದೆ. 860 ಮನೆಗಳಲ್ಲಿನ ಜನರ ಆರೋಗ್ಯ ಪರೀಕ್ಷೆ ನಡೆಸಲಾಗುತ್ತಿದೆ. ಕೊರೊನಾ ಪೀಡಿತ ಓಡಾಡಿರುವ ಮಂಡಿಪೇಟೆ ಮತ್ತು ಮರಳೂರು ದಿಣ್ಣೆ ಸುತ್ತಮುತ್ತಲ ಮನೆಗಳಿಗೆ ತೆರಳಿ ಜನರಿಗೆ ಜ್ವರ, ಕೆಮ್ಮು ಇರುವ ಕುರಿತಂತೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಬಂದು ಮಾಹಿತಿ ಸಂಗ್ರಹಿಸುತ್ತಾರೆ. ಈ ಹಿನ್ನೆಲೆ ಜನರು ಸಹಕರಿಸಬೇಕೆಂದು ಮನವಿ ಮಾಡಿದರು.