ಕರ್ನಾಟಕ

karnataka

ETV Bharat / state

ಬೀದಿಬದಿ ಮಲಗುವ ನಿರ್ಗತಿಕರಿಗೊಂದು ತಾತ್ಕಾಲಿಕ ಸೂರು..!

ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ರಾತ್ರಿ ವೇಳೆ ತಾತ್ಕಾಲಿಕವಾಗಿ ಸೂರು ಒದಗಿಸುವ ಕಾರ್ಯವೊಂದು ನಗರದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಕರೆದುಕೊಂಡು ಬಂದು ಉಪಚರಿಸುವುದು ಅಷ್ಟೇ ಅಲ್ಲದೇ ಅವರಿಗೆ ಸ್ವಚ್ಛತೆ ಬಗ್ಗೆ ಅರಿವು ಸಹ ಮೂಡಿಸಲಾಗುತ್ತದೆ.

By

Published : Jul 20, 2019, 8:31 AM IST

ವಸತಿ ರಹಿತರಿಗೆ ತಾತ್ಕಾಲಿಕ ಆಶ್ರಯ

ತುಮಕೂರು:ಬೀದಿಬದಿ ಮಲಗುವ ನಿರ್ಗತಿಕರಿಗೆ, ರಾತ್ರಿ ವೇಳೆ ತಾತ್ಕಾಲಿಕವಾಗಿ ಸೂರು ಒದಗಿಸುವ ಕಾರ್ಯವೊಂದು ನಗರದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಉದ್ಯಾನವನಗಳಲ್ಲಿ ರಾತ್ರಿ ವೇಳೆ ಅನಿವಾರ್ಯವಾಗಿ ಮಲಗಿ ನಂತರ ಬೆಳಗ್ಗೆ ತಮ್ಮ ಬದುಕು ಅರಸಿ ಕೆಲಸಕ್ಕೆ ಹೋಗುವಂತಹ ನಿರ್ಗತಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ದೀನ್​​ದಯಾಳ್ ಅಂತ್ಯೋದಯ ಯೋಜನೆ ವಸತಿ ರಹಿತರಿಗೆ ತಾತ್ಕಾಲಿಕ ಆಶ್ರಯ ಕೇಂದ್ರವೊಂದು ಅಸ್ತಿತ್ವದಲ್ಲಿದ್ದು, ಈ ಯೋಜನೆ ಇದೀಗ ಎಷ್ಟೋ ಜನರಿಗೆ ಆಸರೆ ಆಗಿದೆ.ಅಲ್ಲದೆ ಆರ್ಥಿಕವಾಗಿ ದುರ್ಬಲರಿದ್ದವರಿಗೂಇದು ಸಹಕಾರಿಯಾಗಿದೆ.

ಇದಕ್ಕಾಗಿಯೇ ಮಹಾನಗರ ಪಾಲಿಕೆ ಆವರಣದಲ್ಲಿ ಕಟ್ಟಡವೊಂದನ್ನು ಮೀಸಲಿರಿಸಲಾಗಿದೆ. ಇಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಇಲ್ಲಿ ಸುಮಾರು 20 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ತಾತ್ಕಾಲಿಕವಾಗಿ ವಸತಿ ಅರಸಿ ಬರುವಂತಹ ನಿರ್ಗತಿಕರಿಗೆ ಅವರು ಸ್ವಚ್ಛವಾಗಿರಲು ನೀರು ಹಾಗೂ ಮೂಲ ಸೌಲಭ್ಯವನ್ನೂ ಒದಗಿಸಿಕೊಡಲಾಗುತ್ತದೆ.

ವಸತಿ ರಹಿತರಿಗೆ ತಾತ್ಕಾಲಿಕ ಆಶ್ರಯ

ಐದು ತಿಂಗಳ ಹಿಂದೆ ತೆರೆಯಲಾಗಿರುವ ಈ ವಸತಿ ವ್ಯವಸ್ಥೆ ತಿಂಗಳಿಗೆ ಕನಿಷ್ಠ 15ರಿಂದ 20 ಮಂದಿ ಬಡವರು ಇಲ್ಲಿ ಬಂದು ಆಶ್ರಯ ಪಡೆಯುತ್ತಿದ್ದಾರೆ. ಇಲ್ಲಿ ಬಹುತೇಕ ವಯೋವೃದ್ಧರೆ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಅವರೆಲ್ಲರೂ ತಮ್ಮ ಕುಟುಂಬದಿಂದ ತಿರಸ್ಕಾರಕ್ಕೆ ಒಳಗಾದವರು.

ರಾಜ್ಯದ ನಾನಾ ಭಾಗಗಳಿಂದ ಕೂಲಿ ಅರಸಿ ನಗರಕ್ಕೆ ಬರುವಂತಹ ವ್ಯಕ್ತಿಗಳಿಗೂ ಇಲ್ಲಿ ತಾತ್ಕಾಲಿಕವಾಗಿ ಸ್ಥಳವಿದೆ. ಈ ಒಂದು ವಿಶಿಷ್ಟವಾದ ಯೋಜನೆ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ 10 ದಿನಕ್ಕೊಮ್ಮೆ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ರಾತ್ರಿ ವೇಳೆ ತೆರಳಿ ಇಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರುಗಳನ್ನು ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಕರೆದುಕೊಂಡು ಬಂದು ಉಪಚರಿಸುತ್ತಾರೆ.

ಇಲ್ಲಿಗೆ ಬಂದವರಿಗೆ ಮುಖ್ಯವಾಗಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇದಲ್ಲದೆ ರಾತ್ರಿ ವೇಳೆ ಒಮ್ಮೆ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನಿಂದ ಊಟದ ವ್ಯವಸ್ಥೆಯನ್ನೂ ಮಾಡುವ ಯೋಜನೆ ರೂಪಿಸಲು ಚಿಂತನೆಯನ್ನು ಅಧಿಕಾರಿಗಳು ನಡೆಸಿದ್ದಾರೆ.

ABOUT THE AUTHOR

...view details