ಕರ್ನಾಟಕ

karnataka

ETV Bharat / state

ಪಾವಗಡ ಪೊಲೀಸ್​ ಹತ್ಯಾಕಾಂಡ ಕೇಸ್​​​​​... ವಿಚಾರಣೆಗೆ ಹಾಜರಾದ ಬಂಡಾಯ ಕವಿ ಗದ್ದರ್​​​ - ಕವಿ ಗದ್ದರ್ ಕೋರ್ಟ್​​ ವಿಚಾರಣೆ ಸುದ್ದಿ

ವೆಂಕಮ್ಮನಹಳ್ಳಿ ಗ್ರಾಮದಲ್ಲಿ 2005ರಲ್ಲಿ ನಡೆದಿದ್ದ ಪೊಲೀಸ್ ಹತ್ಯಾಕಾಂಡದ ಆರೋಪಿಯಾಗಿರುವ ತೆಲಂಗಾಣ ಬಂಡಾಯ ಕವಿ ಗದ್ದರ್ ಪಾವಗಡ ಪಟ್ಟಣದ ಜೆಎಂಎಫ್​​ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಕವಿ ಗದ್ದರ್ ವಿಚಾರಣೆ

By

Published : Nov 6, 2019, 12:57 PM IST

ತುಮಕೂರು /ಪಾವಗಡ: ವೆಂಕಮ್ಮನಹಳ್ಳಿ ಗ್ರಾಮದಲ್ಲಿ 2005ರಲ್ಲಿ ನಡೆದಿದ್ದ ಪೊಲೀಸ್ ಹತ್ಯಾಕಾಂಡದ ಆರೋಪಿಯಾಗಿರುವ ತೆಲಂಗಾಣ ಬಂಡಾಯ ಕವಿ ಗದ್ದರ್ ಪಾವಗಡ ಪಟ್ಟಣದ ಜೆಎಂಎಫ್​​ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಕವಿ ಗದ್ದರ್ ವಿಚಾರಣೆ

ಘಟನೆಯ ಹಿನ್ನೆಲೆ:
2005ರಲ್ಲಿ ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್​​ನನ್ನು ಪೊಲೀಸರು ಎನ್​​ಕೌಂಟರ್ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ 2005ರಲ್ಲಿ ಸರ್ಕಾರಿ ಶಾಲೆಯಲ್ಲಿ ತಂಗಿದ್ದ ಪೊಲೀಸರನ್ನು ನಕ್ಸಲರು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ 90 ಜನ ಆರೋಪಿಗಳಿದ್ದರು. ಇವರಲ್ಲಿ ಗದ್ದರ್ ಮತ್ತು ವರವರರಾವ್ ಆರೋಪಿಗಳಾಗಿದ್ದು, ವರವರರಾವ್ ಎರಡು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಹಾಜಾರಾಗಿದ್ದರು.

ತೆಲಂಗಾಣದ ಬಂಡಾಯ ಕವಿ ಗದ್ದರ್ ಹೈಕೋರ್ಟ್ ನಿರ್ದೇಶನದಂತೆ ಇಂದು ಪಾವಗಡ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕೈಗೊಂಡಿದೆ.

ABOUT THE AUTHOR

...view details