ಕರ್ನಾಟಕ

karnataka

ETV Bharat / state

ಶಿಕ್ಷಕರ ವರ್ಗಾವಣೆ... ಭುಗಿಲೆದ್ದ ಅಸಮಾಧಾನ - ಶಿಕ್ಷಕರ ಅಸಮಾಧಾನ

ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿನ ಕೆಲವು ನಿಯಮಗಳ ಬಲಾವಣೆ, ಶಿಕ್ಷಕರಲ್ಲಿ ಬೇಸರ ಉಂಟುಮಾಡಿದೆ.

ಶಿಕ್ಷಕರ ಅಸಮಾಧಾನ

By

Published : Aug 3, 2019, 11:43 AM IST

ತುಮಕೂರು: ಕೆಲವು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಈ ಬಾರಿ ಆರಂಭಗೊಂಡಿದೆ. ಆದರೆ 3 ವರ್ಷಗಳಿಂದ ವರ್ಗಾವಣೆ ಬಯಸಿ ಕಾಯುತ್ತಿದ್ದ ಶಿಕ್ಷಕರಿಗೆ ಈ ಬಾರಿಯೂ ಕೂಡಾ ಇಲಾಖೆಯ ಕೆಲವು ನಿಯಮಗಳು ಬೇಸರ ತರಿಸಿವೆ.

ಇದುವರೆಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ನಗರಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದ ಶಾಲೆಗಳಿಗೆ ವರ್ಗಾವಣೆಗೆ ಅವಕಾಶ ನೀಡಿರಲಿಲ್ಲ. ಆದರೆ, ಈ ಬಾರಿ ಅದಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಬಾರಿ ಇಲಾಖೆಯು ಕೇವಲ ಶೇಕಡ ಐದರಷ್ಟು ಪ್ರಮಾಣದಲ್ಲಿ ಮಾತ್ರ ವರ್ಗಾವಣೆ ಮಾಡುತ್ತಿದೆ. ಅಲ್ಲದೆ, ಮೂರು ವರ್ಷಗಳಿಂದ ಸಾಮಾನ್ಯ ವರ್ಗಾವಣೆ ಬಯಸಿ ಕಾಯುತ್ತಿರುವ ಶಿಕ್ಷಕರಿಗೆ ಭಾರಿ ನಿರಾಸೆಯಾಗಿದೆ. ಕನಿಷ್ಠ ಶೇಕಡ 10ರಷ್ಟು ಪ್ರಮಾಣದಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆದಿದ್ದರೆ ಶಿಕ್ಷಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಶಿಕ್ಷಕರ ಅಭಿಪ್ರಾಯವಾಗಿದೆ.

ವರ್ಗಾವಣೆ ಪ್ರಕ್ರಿಯೆ ಕುರಿತು ಶಿಕ್ಷಕರ ಅಸಮಾಧಾನ

ತುಮಕೂರು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಆರು ತಾಲೂಕುಗಳಿಂದ 2,684 ಸಹಶಿಕ್ಷಕರು, 57 ಶಾಲಾ ಮುಖ್ಯ ಶಿಕ್ಷಕರು, 50 ಮಂದಿ ದೈಹಿಕ ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು. ಒಟ್ಟಾರೆ ಕೋರಿಕೆ ವರ್ಗಾವಣೆ ಯಂತೆ 224 ಮಂದಿಗೆ ಮಾತ್ರ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಈ ವರ್ಗಾವಣೆ ಪ್ರಕ್ರಿಯೆ ಆಗಸ್ಟ್ 1 ರಿಂದ 7ರ ವರೆಗೆ ನಡೆಯಲಿದೆ. ಕೌನ್ಸೆಲಿಂಗ್ ಮೂಲಕ ನಡೆಯುತ್ತಿದ್ದು ಈ ಬಾರಿ ಶೇಕಡ 4 ರಷ್ಟು ಮಾತ್ರ ವರ್ಗಾವಣೆ ನಡೆಸಲಾಗುತ್ತದೆ. ಏಕೆಂದರೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡುವ ವರ್ಷದಲ್ಲಿ ಶೇಕಡ 1ರಷ್ಟು ಕಡಿತಗೊಳಿಸಬೇಕು ಎಂಬ ನಿಯಮವಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

ಒಟ್ಟಾರೆ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಏನೋ ನಿಯಮಬದ್ಧವಾಗಿ ನಡೆಯುತ್ತಿದೆ. ಆದರೆ, ಕಳೆದ ಎರಡು ವರ್ಷಗಳಿಂದ ವರ್ಗಾವಣೆ ವಂಚಿತ ಶಿಕ್ಷಕರನ್ನು ಗಮನದಲ್ಲಿ ಇರಿಸಿಕೊಂಡಿಲ್ಲ ಎಂಬದು ಶಿಕ್ಷಕರ ಕೊರಗಾಗಿದೆ.

ABOUT THE AUTHOR

...view details