ಕರ್ನಾಟಕ

karnataka

ETV Bharat / state

ಶಿರಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಗೆ ಕೊರೊನಾ... ಆಸ್ಪತ್ರೆಗೆ ದಾಖಲು - ಶಿರಾ ವಿಧಾಸಭೆ ಬೈ ಎಲೆಕ್ಷನ್​

ಶಿರಾ ಉಪಚುನಾವಣೆ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಇದರ ಮಧ್ಯೆ ಕಾಂಗ್ರೆಸ್​ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

TB Jayachandra
TB Jayachandra

By

Published : Nov 9, 2020, 10:11 PM IST

Updated : Nov 9, 2020, 10:20 PM IST

ತುಮಕೂರು:ಶಿರಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿರುವ ಟಿ.ಬಿ ಜಯಚಂದ್ರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ, ಪ್ರಾಥಮಿಕ ಸಂಪರ್ಕದಲ್ಲಿದ್ದ ಟಿ.ಬಿ ಜಯಚಂದ್ರ ಅವರು ಹೋಂ ಕ್ವಾರಂಟೈನ್​ಗೊಳಾಗಿದ್ದರು. ಇದೀಗ ಕಳೆದೆರಡು ದಿನಗಳಿಂದ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿದ್ದು, ವೈದ್ಯರ ಸಲಹೆ ಮೆರೆಗೆ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿರುವ ಅವರು, ಕೋವಿಡ್ ಪಾಸಿಟಿವ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಳಿನ ಮತ ಎಣಿಕೆಗೆ ಭಾಗವಹಿಸಲು ಆಗುವುದಿಲ್ಲ, ನಿಮ್ಮೆಲ್ಲರ ಶ್ರಮ ಹಾಗೂ ಆಶೀರ್ವಾದ ಗೆಲುವಿನ ಫಲಿತಾಂಶ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

Last Updated : Nov 9, 2020, 10:20 PM IST

ABOUT THE AUTHOR

...view details