ಕರ್ನಾಟಕ

karnataka

ETV Bharat / state

ತುಮಕೂರು : ಸೊಗಡು ಶಿವಣ್ಣ-ವಿಹೆಚ್​ಪಿ ಮುಖಂಡನ ನಡುವೆ ಮಾತಿನ ಚಕಮಕಿ.. - Datta Mala campaign in Tumkur

ಇಬ್ಬರ ನಡುವೆ ಮಾತು ತಾರಕಕ್ಕೇರಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ವಿಹೆಚ್​ಪಿ ಮುಖಂಡ ಜಿ.ಕೆ ಶ್ರೀನಿವಾಸ್‌ರನ್ನ ತಳ್ಳಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ನಂತರ ಸ್ಥಳದಲ್ಲಿದ್ದವರು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು..

talk-war-between-sogadu-shivanna-and-vhp-leader
ಸೊಗಡು ಶಿವಣ್ಣ - ವಿಹೆಚ್​ಪಿ ಮುಖಂಡನ ನಡುವೆ ಮಾತಿನ ಚಕಮಕಿ

By

Published : Dec 19, 2021, 10:49 PM IST

ತುಮಕೂರು : ನಗರದಿಂದ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ಯಾತ್ರೆ ತೆರಳುವ ಸಂದರ್ಭದಲ್ಲಿ ಮೆರವಣಿಗೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ತಾರಕ್ಕೇರಿ ವಿಶ್ವ ಹಿಂದೂ ಪರಿಷತ್ ಮುಖಂಡರೊಬ್ಬರ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸೊಗಡು ಶಿವಣ್ಣ -ವಿಹೆಚ್​ಪಿ ಮುಖಂಡನ ನಡುವೆ ಮಾತಿನ ಚಕಮಕಿ

ತುಮಕೂರಿನಲ್ಲಿ ದತ್ತಮಾಲೆ ಅಭಿಯಾನದ ಹಿನ್ನೆಲೆ ಚಿಕ್ಕಮಗಳೂರಿನ ದತ್ತ ಪೀಠಕ್ಕೆ ತೆರಳುವ ಮುನ್ನ ತುಮಕೂರು ನಗರದಲ್ಲಿ ಯಾವ ಮಾರ್ಗದ ಮೂಲಕ ಯಾತ್ರೆ ಸಾಗಬೇಕು ಎನ್ನುವ ವಿಚಾರಕ್ಕಾಗಿ ವಿಶ್ವ ಹಿಂದೂಪರಿಷತ್ ಹಿರಿಯ ಮುಖಂಡ ಜಿ. ಕೆ ಶ್ರೀನಿವಾಸ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನಡುವೆ ವಾಗ್ವಾದ ನಡೆಯಿತು.

ಮೊದಲಿಗೆ ಟೌನ್​ಹಾಲ್​ನಲ್ಲಿ ದತ್ತ ಮಾಲಾಧಾರಿಗಳು ಸೇರಿದ್ದರು. ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ನಗರದಲ್ಲಿ ಯಾತ್ರೆ ನಡೆಸಬೇಕು ಎಂದು ತಿಳಿಸಿದ್ರೆ, ವಿಶ್ವ ಹಿಂದೂ ಪರಿಷತ್ ಮುಖಂಡ ಜಿ. ಕೆ ಶ್ರೀನಿವಾಸ್ ಮೆರವಣಿಗೆ ನಡೆಸೋದು ಬೇಡ, ನೇರವಾಗಿ ಚಿಕ್ಕಮಗಳೂರಿಗೆ ಹೋಗೋಣ ಎಂದು ತಿಳಿಸಿದ್ದಾರೆ.

ಇಬ್ಬರ ನಡುವೆ ಮಾತು ತಾರಕಕ್ಕೇರಿದೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಮಾಜಿ ಸಚಿವ ಸೊಗಡು ಶಿವಣ್ಣ ಅವರು, ವಿಹೆಚ್​ಪಿ ಮುಖಂಡ ಜಿ.ಕೆ ಶ್ರೀನಿವಾಸ್‌ರನ್ನ ತಳ್ಳಿ ಅವರ ಮೇಲೆ ಹಲ್ಲೆಗೆ ಯತ್ನಿಸಿದರು. ನಂತರ ಸ್ಥಳದಲ್ಲಿದ್ದವರು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಓದಿ:ಎಂಇಎಸ್ ಸಂಘಟನೆ ಬ್ಯಾನ್ ಮಾಡಲೇಬೇಕು : ನಟ ಪ್ರೇಮ್​

ABOUT THE AUTHOR

...view details