ತುಮಕೂರು:ಕಾರ್ಯದ ಒತ್ತಡದಲ್ಲಿದ್ದ ತಹಶೀಲ್ದಾರ್ ಮಹಿಳಾ ಸಿಬ್ಬಂದಿಗೆ ನಿಂದಿಸಿದ್ದಾರೆಂದು ಆರೋಪಿಸಿ ನೂರಾರು ಗ್ರಾಮ ಲೆಕ್ಕಾಧಿಕಾರಿಗಳು ಮಧುಗಿರಿ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು.
ಮಹಿಳಾ ಸಿಬ್ಬಂದಿ ಮೇಲೆ ತಹಶೀಲ್ದಾರ್ ಮತ್ತು ಆತನ ಪತ್ನಿಯಿಂದ ನಿಂದನೆ, ಹಲ್ಲೆ ಆರೋಪ ಮಧುಗಿರಿ ತಾಲೂಕಿನ ಬೇಡತ್ತೂರು ಮತ್ತು ರೆಡ್ಡಿಹಳ್ಳಿ ಗ್ರಾಮದ ಜನಸಂಪರ್ಕ ಸಭೆಯ ಪೂರ್ವಭಾವಿ ಸಿದ್ಧತೆಯ ಬಗ್ಗೆ ಪರಿಶೀಲನೆಗಾಗಿ ಭೇಟಿ ನೀಡಿದ ವೇಳೆ ತಹಶೀಲ್ದಾರ್ ನಂದೀಶ್ ಸೇರಿದಂತೆ ಸಿಬ್ಬಂದಿ ಜೊತೆ ಗ್ರೂಪ್ ಫೋಟೋ ತೆಗೆದು ಅದನ್ನು ರೆಡ್ಡಿಹಳ್ಳಿ ಮಹಿಳಾ ಗ್ರಾಮಲೆಕ್ಕಿಗರಾದ ಮಂಜುಳ ಎಂಬುವರು ತಾಲೂಕು ಕಚೇರಿ ಅಧಿಕಾರಿಗಳ ವಾಟ್ಸಪ್ ಗ್ರೂಪ್ಗೆಗೆ ಶೇರ್ ಮಾಡಿದ್ದರಂತೆ. ನಂತರ ತಹಶೀಲ್ದಾರ್ ನಂದೀಶ್ ವಸತಿ ಗೃಹಕ್ಕೆ ಬರುವಂತೆ ದೂರವಾಣಿ ಮೂಲಕ ಮಹಿಳೆಗೆ ತಿಳಿಸಿದ್ದರಂತೆ.
ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ ಮನೆಗೆ ಹೋದ ಸಂದರ್ಭದಲ್ಲಿ ತಹಶೀಲ್ದಾರ್ ಮತ್ತು ಅವರ ಪತ್ನಿ ತ್ರಿವೇಣಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ ನನ್ನ ಕುಟುಂಬದವರೊಂದಿಗೆ ಸಹ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ಇದ್ರಿಂದ ತೀವ್ರ ಮಾನಸಿಕವಾಗಿ ನೊಂದು ಹೋಗಿದ್ದೇನೆ ಎಂದು ಮಂಜುಳಾ, ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅವರ ಕರೆ ಸಂಪೂರ್ಣ ರೆಕಾರ್ಡ್ ಮಾಡಿದ್ದು, ತಮ್ಮ ಮುಂದೆ ಹಾಜರುಪಡಿಸಲು ಸಿದ್ಧಳಿದ್ದೇನೆ. ನನ್ನ ಮೇಲೆ ನಡೆಸಿರುವಂತಹ ದೌರ್ಜನ್ಯವನ್ನು ಪರಿಶೀಲಿಸಿ, ತಹಶೀಲ್ದಾರ್ ಮತ್ತು ಅವರ ಪತ್ನಿ ತ್ರಿವೇಣಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಜಿಲ್ಲಾಧಿಕಾರಿಯವರಲ್ಲಿ ಕೋರಿದ್ದಾರೆ.
ಇನ್ನು ತಹಶೀಲ್ದಾರ್ ವರ್ತನೆಯನ್ನು ಕಚೇರಿ ಸಿಬ್ಬಂದಿ ಸಹ ತೀವ್ರವಾಗಿ ಖಂಡಿಸಿದ್ದು, ಆಕೆಯ ಬೆಂಬಲಕ್ಕೆ ನಿಂತು ಧರಣಿ ನಡೆಸಿದ್ದಾರೆ.