ಕರ್ನಾಟಕ

karnataka

ETV Bharat / state

ಮಗ - ಸೊಸೆ ಕಿರುಕುಳದಿಂದ ಮನೆಯಿಂದ ಹೊರಗಿದ್ದ ವೃದ್ದೆ: ವಾಪಸ್ ಗೂಡಿಗೆ ಸೇರಿಸಿದ ತಹಶೀಲ್ದಾರ್​

ಕೊರಟಗೆರೆ ತಾಲೂಕಿನ ಬುಡ್ಡಯ್ಯನಪಾಳ್ಯ ಗ್ರಾಮದಲ್ಲಿ ವಾಸವಿದ್ದ ದೊಡ್ಡ ಹನುಮಕ್ಕ ಅವರ ಮೂರನೇ ಮಗ ರಾಘು ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಿಂದ ವಾಪಸ್ ಮನೆಗೆ ಬಂದಿದ್ದರು. ಆದರೆ ಬಳಿಕ ವೃದ್ಧೆಯನ್ನು ಮನೆಯಿಂದ ಹೊರ ಹಾಕಿದ್ದರಂತೆ.

ವೃದ್ದೆಯೊಂದಿಗೆ ಮಾತನಾಡಿದ ತಹಶೀಲ್ದಾರ್
ವೃದ್ದೆಯೊಂದಿಗೆ ಮಾತನಾಡಿದ ತಹಶೀಲ್ದಾರ್

By

Published : Jul 28, 2022, 4:45 PM IST

ತುಮಕೂರು: ತನ್ನ ಹೆಸರಿನಲ್ಲಿರುವ ಮನೆಯಿಂದಲೇ ನನಗೆ ಮಗ ಹೊರಗೆ ಹಾಕಿದ್ದಾರೆ ಎಂದು ಗೋಳಾಡುತ್ತಿದ್ದ ದೊಡ್ಡ ಹನುಮಕ್ಕ ಎಂಬ ವೃದ್ದೆಗೆ ಅವರ ಮನೆಯಲ್ಲಿಯೇ ವಾಸ ಮಾಡಲು ಕೊರಟಗೆರೆ ತಹಶೀಲ್ದಾರ್​ ನಹೀದಾ ಅವಕಾಶ ಮಾಡಿಕೊಟ್ಟಿದ್ದಾರೆ.

ನೊಂದ ವೃದ್ಧೆಗೆ ಸಾಂತ್ವನ ಹೇಳಿದ ತಹಶೀಲ್ದಾರ್

ಕೊರಟಗೆರೆ ತಾಲೂಕಿನ ಬುಡ್ಡಯ್ಯನಪಾಳ್ಯ ಗ್ರಾಮದಲ್ಲಿ ವಾಸವಿದ್ದ ದೊಡ್ಡ ಹನುಮಕ್ಕ ಅವರ ಮೂರನೇ ಮಗ ರಾಘು ಕೊರೊನಾ ಸಂದರ್ಭದಲ್ಲಿ ಬೆಂಗಳೂರಿನಿಂದ ವಾಪಸ್ ಮನೆಗೆ ಬಂದಿದ್ದರು. ಅಲ್ಲದೇ, ಜೋಪಾನವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಕೂಡಾ. ಆದರೆ, ದಿನ ಕಳೆದಂತೆ ಮಗ -ಸೊಸೆ ಇಬ್ಬರೂ ಸೇರಿ ವೃದ್ಧೆಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದರು.

ಇದರಿಂದ ನೊಂದು ಬೆಂದು ಒದ್ದಾಡುತ್ತಿದ್ದ ದೊಡ್ಡ ಹನುಮಕ್ಕನ ವಿಷಯ ತಿಳಿದ ತಹಶೀಲ್ದಾರ್​ ನಹೀದಾ ಸ್ಥಳಕ್ಕೆ ಭೇಟಿ ನೀಡಿ ವಾಪಸ್ ಆಕೆಯ ಸ್ವಂತ ಮನೆಗೆ ಸೇರಿಸಿದ್ದಾರೆ. ಅಲ್ಲದೇ, ಅವರನ್ನು ಮನೆಯಿಂದ ಹೊರಗೆ ಹಾಕದಂತೆ ಮಗ ಹಾಗೂ ಸೊಸೆಗೆ ಎಚ್ಚರಿಕೆ ಕೊಟ್ಟು ಬುದ್ದಿವಾದ ಹೇಳಿದ್ದಾರೆ.

ಓದಿ:ರಾಜ್ಯದಲ್ಲಿ ಭಾರಿ ಮಳೆ ಮುಂದುವರಿಕೆ: ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ABOUT THE AUTHOR

...view details