ಪಾವಗಡ / ತುಮಕೂರು: ತಬ್ಲಿಘಿಗಳನ್ನು ಊರಿನಲ್ಲಿ ಕ್ವಾರಂಟೈನ್ ಮಾಡಿರುವುದು ಇಲ್ಲಿನ ಜನರನ್ನು ಕೆರಳಿಸಿದೆ.
ವಸತಿ ಶಾಲೆಯಲ್ಲಿ ತಬ್ಲಿಘಿಗಳ ಕ್ವಾರಂಟೈನ್: ಸುತ್ತಮುತ್ತಲಿನ ಗ್ರಾಮಗಳ ಜನರ ಆಕ್ರೋಶ
ತಬ್ಲಿಘಿಗಳನ್ನು ಪಾವಗಡ ಪಟ್ಟಣದ ಸಮೀಪವಿರುವ ವಸತಿ ನಿಲಯವೊಂದರಲ್ಲಿ ಕ್ವಾರಂಟೈನ್ ಮಾಡಿರುವುದು ಇಲ್ಲಿನ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ.
ದೆಹಲಿಯ ಧಾರ್ಮಿಕ ಸಮಾವೇಶಕ್ಕೆ ತೆರಳಿದ್ದ 18 ಕ್ಕೂ ಹೆಚ್ಚು ಜನರನ್ನು ಗುಜರಾತ್ ಸರ್ಕಾರ ಕ್ವಾರಂಟೈನ್ ಮಾಡಿತ್ತು. ನಂತರ ಮೇ 4 ರಂದು ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ತಮ್ಮ ಸ್ವಗ್ರಾಮಗಳಿಗೆ ಕಳುಹಿಸಿದ ಕಾರಣ ತಾಲೂಕಿನ ವೈ.ಎನ್.ಹೋಸಕೋಟೆಯ ತಬ್ವಿಘಿಗಳನ್ನು ಪಾವಗಡ ಪಟ್ಟಣದ ಸಮೀಪದ ಕುರುಬರಹಳ್ಳಿ ಗೇಟ್ ಬಳಿಯ ಮಹಿಳಾ ಕಾಲೇಜಿನ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಕುರುಬರಹಳ್ಳಿ ಗ್ರಾಮದ ಸುತ್ತಲಿನ ಹಳ್ಳಿಗಳ ಸುಮಾರು 500 ಕ್ಕೂ ಹೆಚ್ಚು ಜನರು ಸ್ಥಳಕ್ಕೆ ಧಾವಿಸಿ ತಾಲೂಕು ಆಡಳಿತದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಾಲೂಕು ಅಧಿಕಾರಿಗಳು, ಪೊಲೀಸರು ಹಾಗೂ ಜನತೆಯ ಮಧ್ಯೆ ವಾಗ್ವಾದ ನಡೆದಿದೆ.