ಕರ್ನಾಟಕ

karnataka

ETV Bharat / state

ತುಮಕೂರು: ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹೋಟೆಲ್ ಮಾಲೀಕನಿಂದ ಹಲ್ಲೆ..

ಸ್ವಿಗ್ಗಿ ಮೂಲಕ ಚಿಕನ್ ಬಿರಿಯಾನಿಯನ್ನು ಗ್ರಾಹಕರು ಆರ್ಡರ್​ ಮಾಡಿದ್ದರು. ಆ ಆರ್ಡರ್​ ಕಲೆಕ್ಟ್ ಮಾಡಿಕೊಳ್ಳಲು ಹೋದಾಗ ನವಾಬಿ ರೆಸ್ಟೋರೆಂಟ್ ಮಾಲೀಕ ಪಾರ್ಸೆಲ್​ ತಡವಾಗಿ ಬಂದಿದ್ದಕ್ಕೆ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

swiggy-boy-assaulted-by-hotel-owner-in-tumkur
ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹೋಟೆಲ್ ಮಾಲೀಕನಿಂದ ಹಲ್ಲೆ

By

Published : Dec 27, 2021, 8:41 PM IST

ತುಮಕೂರು:ಸರಿಯಾದ ಸಮಯಕ್ಕೆ ಪಾರ್ಸೆಲ್​ ತಂದು ಕೊಡದಿದ್ದಕ್ಕೆ ಕುಪಿತಗೊಂಡ ಹೋಟೆಲ್ ಮಾಲೀಕನೊಬ್ಬ ಸ್ವಿಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಸ್ವಿಗ್ಗಿ ಡೆಲಿವರಿ ಬಾಯ್ ಮೇಲೆ ಹೋಟೆಲ್ ಮಾಲೀಕನಿಂದ ಹಲ್ಲೆ

ನಗರದ ನವಾಬಿ ರೆಸ್ಟೋರೆಂಟ್​ನಲ್ಲಿ ನಿತೀಶ್ ಎಂಬ ಸ್ವಿಗ್ಗಿ ಡೆಲಿವರಿ ಬಾಯ್ ಹಲ್ಲೆಗೊಳಗಾದವನಾಗಿದ್ದಾನೆ. ಆರ್ಡರ್​ ಕಲೆಕ್ಟ್ ಮಾಡಿಕೊಳ್ಳಲು ತೆರಳಿದ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ವಿಗ್ಗಿ ಮೂಲಕ ಚಿಕನ್ ಬಿರಿಯಾನಿಯನ್ನು ಗ್ರಾಹಕರು ಆರ್ಡರ್​ ಮಾಡಿದ್ದರು. ಆ ಆರ್ಡರ್​ ಕಲೆಕ್ಟ್ ಮಾಡಿಕೊಳ್ಳಲು ಹೋದಾಗ ನವಾಬಿ ರೆಸ್ಟೋರೆಂಟ್ ಮಾಲೀಕ ಪಾರ್ಸೆಲ್​ ತಡವಾಗಿ ಬಂದಿದ್ದಕ್ಕೆ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಲೀಕ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯಗಳು ಮೊಬೈಲ್​ನಲ್ಲಿ ದಾಖಲಾಗಿದೆ. ಡೆಲಿವರಿ ಬಾಯ್ ಮಾತನಾಡುತ್ತಿದ್ದಂತೆ ಏಕಾಏಕಿ ಮುಂದೆ ಬಂದ ಮಾಲೀಕ ಕಪಾಳ ಮೋಕ್ಷ ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದವರು ಇದನ್ನು ತಡೆಯಲು ಯತ್ನಿಸಿದ್ದಾರೆ.

ಓದಿ:ಹಾಸನ : ತನ್ನ ಪತ್ನಿಗೆ ಕರೆ ಮಾಡಿದಕ್ಕೆ ವ್ಯಕ್ತಿಯನ್ನ ಕೊಲೆ ಮಾಡಿದ ಪತಿ!

For All Latest Updates

ABOUT THE AUTHOR

...view details