ಕರ್ನಾಟಕ

karnataka

ETV Bharat / state

ರಥಸಪ್ತಮಿ ಅಂಗವಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸೂರ್ಯ ನಮಸ್ಕಾರ - ತುಮಕೂರಿನಲ್ಲಿ ಸೂರ್ಯ ನಮಸ್ಕಾರ ಆಚರಣೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥಸಪ್ತಮಿ ಅಂಗವಾಗಿ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಆಚರಣೆ ಏರ್ಪಡಿಸಲಾಗಿದೆ.

Patanjali Yoga Education Committee
ಪತಂಜಲಿ ಯೋಗ ಶಿಕ್ಷಣ ಸಮಿತಿ

By

Published : Jan 30, 2020, 10:57 PM IST

ತುಮಕೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥಸಪ್ತಮಿ ಅಂಗವಾಗಿ ಫೆಬ್ರವರಿ 2ರಂದು ಬೆಳಗ್ಗೆ 5.30 ರಿಂದ 7.30 ರವರೆಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಆಚರಣೆ ಏರ್ಪಡಿಸಲಾಗಿದೆ ಎಂದು ಪ್ರಾಂತ್ಯ ಸಂಚಾಲಕ ತ್ಯಾಗರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ಆಯೋಜನೆ ಮಾಡಲಾಗಿದ್ದು, ಹಿರೇಮಠದ ಅಧ್ಯಕ್ಷ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯ ವಹಿಸುವರು. ನಗರ ಶಾಸಕ ಜ್ಯೋತಿ ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಈ ಸಮಾರಂಭದಲ್ಲಿ ಸುಮಾರು 2,000ಕ್ಕೂ ಹೆಚ್ಚು ಯೋಗಪಟುಗಳು ಮತ್ತು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸುದ್ದಿಗೋಷ್ಠಿ

ರಥಸಪ್ತಮಿ ದಿನ ಬಹಳ ವಿಶೇಷವಾದದ್ದು. ಅಂದು ಸೂರ್ಯಾರಾಧನೆ, ಯೋಗ ಸಾಧನೆ ಮಾಡುವುದರಿಂದ ವಿಶೇಷ ಪರಿಣಾಮ ಮೂಡುತ್ತದೆ ಎಂದು ಸನಾತನ ಧರ್ಮದಲ್ಲಿ ಹಿರಿಯರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಥಸಪ್ತಮಿಯಂದು 108 ಸೂರ್ಯ ನಮಸ್ಕಾರ ಮಾಡುವ ಕಾರ್ಯವನ್ನು ಮಾಡುತ್ತಿದ್ದೇವೆ. 108ರಲ್ಲಿ 1 ಏಕತೆಯ ಸಂಕೇತವಾದರೆ, 0 ಅಖಂಡತೆಯ ಸಂಕೇತ, 8 ಎಂಬುದು ಅಷ್ಟ ದಿಕ್ಕುಗಳಲ್ಲಿ ಪಸರಿಸಿರುವ ನಮ್ಮ ಸಾಧನೆ ಎಂದರ್ಥ. ಇದನ್ನು ಮಾಡುವುದರಿಂದ ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡುತ್ತದೆ, ಹಾಗಾಗಿ ಈ ಕಾರ್ಯ ಮಾಡಲಾಗುತ್ತಿದೆ. ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಯೋಗ ಹಾಗೂ ಸೂರ್ಯ ನಮಸ್ಕಾರಗಳನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details