ಕರ್ನಾಟಕ

karnataka

ETV Bharat / state

ಸೋಂಕು ಹರಡುವಿಕೆ ಭೀತಿಯಿಂದ ಸರ್ಜರಿಗಳನ್ನು ಮುಂದೂಡಲಾಗಿದೆ: ಡಾ.ಮಹೇಶ್ - ತುಮಕೂರು ಆಸ್ಪತ್ರೆ

ಜಿಲ್ಲೆಯಲ್ಲಿ ಕೋವಿಡೇತರ ರೋಗಗಳಿಂದ ಬಳಲುತ್ತಿರುವ ಕೆಲ ರೋಗಿಗಳ ಶಸ್ತ್ರಚಿಕಿತ್ಸೆಯನ್ನು ಕೋವಿಡ್​ ಕಾರಣದಿಂದ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ತುರ್ತಾಗಿ ಆಗಬೇಕಾದ ಶಸ್ತ್ರ ಚಿಕಿತ್ಸೆಗಳನ್ನು ಸದ್ಯ ಮಾಡಲಾಗ್ತಿದೆ ಎಂದು ವೈದ್ಯರು ಹೇಳಿದ್ದಾರೆ.

dr mahesh
ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಮಹೇಶ್

By

Published : Jun 9, 2021, 8:33 AM IST

ತುಮಕೂರು:ಸೋಂಕು ಹರಡುವಿಕೆ ಭೀತಿಯಿಂದಾಗಿ ಕೋವಿಡೇತರ ರೋಗಗಳಿಂದ ಬಳಲುತ್ತಿರುವ ರೋಗಿಗಳು ಪರದಾಡುವಂತಾಗಿದೆ. ಆದ್ರೆ ಕೆಲವು ರೋಗಿಗಳ ಗಂಭೀರ ಆರೋಗ್ಯ ಪರಿಸ್ಥಿತಿಯನ್ನು ಅರಿತು ವೈದ್ಯರು ಸೋಂಕು ತಗುಲಿದ್ದರೂ ಕೂಡ ಚಿಕಿತ್ಸೆ ನೀಡಿರುವ ಉದಾಹರಣೆಗಳು ಜಿಲ್ಲೆಯಲ್ಲಿ ಕಂಡುಬಂದಿವೆ.

ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಮಹೇಶ್

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಶಸ್ತ್ರಚಿಕಿತ್ಸಕ ಡಾ.ಮಹೇಶ್, ಸರ್ಜರಿ ಮುಂದೂಡಬಹುದಾದ ರೋಗಿಗಳಿಗೆ ಧೈರ್ಯ ಹೇಳಿ ಮುಂದಿನ ತಿಂಗಳಿಗೆ ಮುಂದೂಡಲಾಗಿದೆ. ಅಪೆಂಡಿಕ್ಸ್, ಹರ್ನಿಯಾ, ಥೈರಾಯ್ಡ್, ಬ್ರೆಸ್ಟ್, ಪಿತ್ತಕೋಶಕ್ಕೆ ಸಂಬಂಧಿಸಿದ ರೋಗಕ್ಕೆ ಸರ್ಜರಿ ಮಾಡಬೇಕಾದ ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ. ಆ ಪೈಕಿ ಥೈರಾಯ್ಡ್ ಸಂಬಂಧಿಸಿದ ಸರ್ಜರಿಗಳನ್ನು ಮುಂದೂಡಲಾಗಿದೆ. ಅತಿ ಹೆಚ್ಚಿನ ನೋವಿನಿಂದ ಬಳಲುತ್ತಿರುವ ಹರ್ನಿಯಾ ರೋಗಕ್ಕೆ ಸಂಬಂಧಿಸಿದವರಿಗೆ, ಹಾಲುಣಿಸುವ ಎದೆ ಸರ್ಜರಿಗಳನ್ನು ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾದ ನಂತರ ಮಾಡಬಹುದು ಎಂದರು.

ಇದನ್ನೂ ಓದಿ:ಕಾಸರಕೋಡಿನಲ್ಲಿ ಕಡಲಾಮೆ ಮರಿಗಳ ಸಂರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ

ಕೋವಿಡ್​​ನಿಂದ ಬಳಲುತ್ತಿದ್ದ, ತುರ್ತು ಸರ್ಜರಿ ಅಗತ್ಯವಿರೋ ಪಿತ್ತಕೋಶಕ್ಕೆ ಸಂಬಂಧಿಸಿದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಯಾವುದು ತುರ್ತಾಗಿ ಆಗಬೇಕೋ ಅಂತಹ ಶಸ್ತ್ರಚಿಕಿತ್ಸೆಗಳನ್ನು ಮಾಡುತ್ತಿದ್ದೇವೆ. ಈ ನಡುವೆ 2ನೇ ಅಲೆಯ ವೇಳೆ ಮಧ್ಯಮ ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಸರ್ಜರಿಗಳನ್ನು ಮಾಡಿಸಿಕೊಳ್ಳಲು ಬಂದಿಲ್ಲ ಎಂದು ಡಾ. ಮಹೇಶ್ ತಿಳಿಸಿದರು.

ABOUT THE AUTHOR

...view details