ತುಮಕೂರು: ಕಾನೂನು ವಿಷಯದಲ್ಲಿ ಕಲಿಕೆ ನಿರಂತರವಾಗಿದ್ದರೆ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ. ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ಕಾನೂನು ವಿಷಯದಲ್ಲಿ ಕಲಿಕೆ ನಿರಂತರವಾಗಿದ್ದರೆ ವಿದ್ಯಾರ್ಥಿಗಳಿಗೆ ಯಶಸ್ಸು: ನ್ಯಾ. ಟಿ. ಎಸ್ ಪಾಟೀಲ್ - ಕಾನೂನು ಹಾಗೂ ಸಂವಿಧಾನ
ಕಾನೂನು ವಿಷಯದಲ್ಲಿ ಕಲಿಕೆ ನಿರಂತರವಾಗಿದ್ದರೆ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಪಡೆಯಬಹುದು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಟಿ. ಎಸ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಕಾನೂನು ಹಾಗೂ ಸಂವಿಧಾನ ತಾಯಿ ಇದ್ದಂತೆ. ಹುಟ್ಟಿನಿಂದ ಸಾವಿನವರೆಗೂ ಕಾನೂನು ಅವಶ್ಯಕವಾಗಿದೆ. ಕಾನೂನು ಹಾಗೂ ಸಂವಿಧಾನವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಅಂತಹ ವಿಷಯವನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು ಎಂದಿದ್ದಾರೆ.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ ಅವರು ಮಾತನಾಡಿ, ಎಲ್ ಎಲ್ ಬಿ ಸ್ಪರ್ಧಾತ್ಮಕ ವಿಷಯವಾಗಿ ಪರಿವರ್ತಿತವಾಗಿದೆ. ಹೀಗಾಗಿ ನ್ಯಾಯಾಧೀಶರಾಗುವ ಕಡೆ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು. ವೃತ್ತಿಜೀವನದಲ್ಲಿ ಯಶಸ್ಸು ಗಳಿಸಲು ಕಾನೂನಿನ ಅಭ್ಯಾಸದ ಕಡೆ ಗಮನಹರಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಾಸನಗೊಳಿಸುವ ಮೂಲಕ ವೃತ್ತಿಜೀವನದಲ್ಲಿ ಯಶಸ್ಸುಗಳಿಸಲು ಅಗತ್ಯ ತಯಾರಿಯನ್ನು ಈಗಿನಿಂದಲೇ ಪ್ರಾರಂಭಿಸಬೇಕು ಎಂದರು.