ತುಮಕೂರು: ಉಕ್ರೇನ್ನಲ್ಲಿ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ತುಮಕೂರಿನ ವಿದ್ಯಾರ್ಥಿನಿ ರೇಖಾ ಸುರಕ್ಷಿತವಾಗಿ ಮನೆಗೆ ವಾಪಸ್ ಆಗಿದ್ದಾರೆ.
ರೇಖಾ ಅವರ ತಾಯಿ ಧನಲಕ್ಷ್ಮಿ ಮಾತನಾಡಿದ್ದಾರೆ ಈ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅವರು, ಉಕ್ರೇನ್ನಲ್ಲಿದ್ದಾಗ ನೆಟ್ವರ್ಕ್ ಸಮಸ್ಯೆ ಇತ್ತು. ಹಾಗಾಗಿ, ನಮ್ಮ ತಂದೆ ತಾಯಿ ಜೊತೆ ನಿರಂತರವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ನಮ್ಮ ತಂದೆ ತಾಯಿ ನನಗೋಸ್ಕರವೇ ಕಾದು ಕುಳಿತು ಸರಿಯಾಗಿ ಊಟವನ್ನು ಮಾಡುತ್ತಿರಲಿಲ್ಲ. ಈಗ ಮರಳಿರುವುದು ಸಂತೋಷವಾಗಿದೆ ಎಂದಿದ್ದಾರೆ.
ವಿದ್ಯಾರ್ಥಿನಿ ರೇಖಾ ಮಾತನಾಡಿದ್ದಾರೆ ಮಗಳು ತುಂಬಾ ದೂರದಿಂದ ಪ್ರಯಾಣ ಮಾಡಿರುತ್ತಾಳೆ ಎಂದು ನಾನು 12 ಗಂಟೆ ವೇಳೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋದೆ. ನಂತರ ಅಲ್ಲಿ ರಾತ್ರಿ 10:30ಕ್ಕೆ ವಿಮಾನ ಬರುತ್ತೆ ಅಂದ್ರು. ಸ್ವಲ್ಪ ಸಮಯದ ನಂತರ ಮತ್ತೊಂದು ಇಂಟಿಮೇಷನ್ ಬಂತು. ಅದರಲ್ಲಿ 6:30ಕ್ಕೆ ವಿಮಾನ ಬರುತ್ತೆ ಅಂದ್ರು. ವಿಮಾನ ಬಂದ ನಂತರ ಮಗಳನ್ನು ಕಂಡ ನಾನು, ಅವಳನ್ನು ತುಂಬಾ ಹೊತ್ತು ತಬ್ಬಿಕೊಂಡೆ, ಕಣ್ಣೀರು ಹಾಕಿದೆ ಎಂದು ರೇಖಾಳ ತಾಯಿ ಧನಲಕ್ಷ್ಮಿ ತಿಳಿಸಿದ್ದಾರೆ.
ಓದಿ:3ನೇ ಅಲೆಯಲ್ಲಿ ಕ್ಷೀಣಿಸುತ್ತಿದೆ ಸೋಂಕಿತರ ಸಂಖ್ಯೆ: 268 ಮಂದಿಗೆ ಸೋಂಕು, 14 ಮಂದಿ ಬಲಿ