ಕರ್ನಾಟಕ

karnataka

ETV Bharat / state

"ನಾವೆಷ್ಟು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಕೊಟ್ಟಿದ್ದೇವೆ ಎಂದು HDK ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು":ಶ್ರೀನಿವಾಸ್

ಬದ್ಧತೆ ಬಗ್ಗೆ ನಮ್ಮ ಆತ್ಮ ವಿಮರ್ಶೆ ನಾವು ಮಾಡಿಕೊಳ್ಳಬೇಕು. ಸಿದ್ದರಾಮಯ್ಯರಿಗೆ ಹೇಳುವ ಮೊದಲು ನಾವೆಷ್ಟು ಅಲ್ಪ ಸಂಖ್ಯಾತರಿಗೆ ಪ್ರಾತಿನಿಧ್ಯ ಕೊಟ್ಟಿದ್ದಿವೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದ್ದಾರೆ.

ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್
ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್

By

Published : Oct 19, 2021, 10:30 PM IST

ತುಮಕೂರು:ಸಿದ್ದರಾಮಯ್ಯರಿಗೆ ಹೇಳುವ ಮೊದಲು ನಾವೆಷ್ಟು ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಕೊಟ್ಟಿದ್ದೇವೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು, ಬದ್ಧತೆ ಬಗ್ಗೆ ನಮ್ಮ ಆತ್ಮ ವಿಮರ್ಶೆ ನಾವು ಮಾಡಿಕೊಳ್ಳಬೇಕು. ಉಪಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿ ಏನು ಪ್ರಯೋಜನ ಎಂದರು.

ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿಕೆ

ತುಮಕೂರು ನಗರದಲ್ಲಿ 45-50 ಸಾವಿರ ಮುಸ್ಲಿಮರ ಮತ ಇದೆ. ಆದರೂ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ. ಇಂಥದ್ದರಲ್ಲಿ 10 ರಿಂದ 15 ಸಾವಿರ ಮತ ಇರುವ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು ಯಾವ ಪ್ರಯೋಜನವೂ ಇಲ್ಲ. ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿ ಏನು ಪ್ರಯೋಜನ ಆಯ್ತು? ಎಂದು ಪ್ರಶ್ನಿಸಿದರು.

ಆರ್​ಎಸ್​ಎಸ್ ಬಗ್ಗೆ ಮಾತನಾಡುವುದರಿಂದ ನಮಗೆ ಏನು ಪ್ರಯೋಜನವಿದೆ. ನಮ್ಮ ಪಕ್ಷ ಕಟ್ಟುವ ಕೆಲಸ ನಾವು ಮಾಡಿಕೊಂಡು ಹೋಗಬೇಕು. ಅದನ್ನು ಬಿಟ್ಟು ಈ ರೀತಿಯ ಹೇಳಿಕೆ ಕೊಡಬಾರದು ಎಂದರು.

ABOUT THE AUTHOR

...view details