ಕರ್ನಾಟಕ

karnataka

ETV Bharat / state

ಜನ ಎಲ್ಲವನ್ನೂ ಅಗತ್ಯವಸ್ತು ಎಂಬಂತೆ ಪರಿಗಣಿಸುತ್ತಿದ್ದಾರೆ: ಸಿ.ಟಿ ರವಿ

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮತ್ತು ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸಾ ಸೌಲಭ್ಯಗಳನ್ನು ನೀಡಲು ಸರ್ವ ಪ್ರಯತ್ನ ಮಾಡುತ್ತಿದೆ. ವಿವಿಧ ದೇಶಗಳು ಸಹ ಭಾರತದ ವೈದ್ಯಕೀಯ ಕಷ್ಟವನ್ನು ಅರಿತು ಸಹಕಾರ ನೀಡುತ್ತವೆ. ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಸಿ.ಟಿ.ರವಿ ತಿಳಿಸಿದರು.

Statement of BJP National Secretary CT Ravi at Tumkur
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ

By

Published : May 2, 2021, 9:45 AM IST

Updated : May 2, 2021, 10:53 AM IST

ತುಮಕೂರು: ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿದ್ದು ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ, ಎಲ್ಲವನ್ನೂ ಅಗತ್ಯ ವಸ್ತುಗಳಂತೆ ಪರಿಗಣಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿಷಾದ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ

ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಜನರಿಗೆ ಮಾಸ್ಕ್ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಲಾಗುತ್ತಿದೆ. ಆದರೆ ಸರ್ಕಾರವೇ ಮಾಸ್ಕ್ ಹಾಕಲು ಸಾಧ್ಯವಿಲ್ಲ. ಜನರು ಮೈಮರೆತರೆ ಹೊರಗಡೆ ಇರುವ ಸೋಂಕು ಮನೆಯೊಳಗೆ ಬರಲಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಿ ಅತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

300 ಮೆಟ್ರಿಕ್ ಟನ್ ಆಕ್ಸಿಜನ್ ನಿಗದಿಯಾಗಿದ್ದ ರಾಜ್ಯಕ್ಕೆ ಕೇಂದ್ರ ಸರ್ಕಾರ 800 ಮೆಟ್ರಿಕ್ ಟನ್ ನೀಡುತ್ತಿದೆ ಎಂದು ತಿಳಿಸಿದರು. ಈ ಹಿಂದೆ ವಿದೇಶಕ್ಕೆ ಔಷಧಿಗಳನ್ನು ಕಳುಹಿಸಿದ ಸಂದರ್ಭದಲ್ಲಿ ಕೆಲವರು ವ್ಯಂಗ್ಯ ಮಾಡಿದ್ದರು. ಆದರೆ ಇದೀಗ ನಾ ನಿನಗಾದರೆ ನೀ ನನಗೆ ಎಂಬ ನಾಣ್ಣುಡಿಯಂತೆ ವಿವಿಧ ದೇಶಗಳು ಭಾರತದ ನೆರವಿಗೆ ಬರುತ್ತಿವೆ ಎಂದರು.

ಇದನ್ನೂ ಓದಿ : ಕೊರೊನಾ ಸಂಕಷ್ಟದಲ್ಲಿ ಇಂದು'ಪಂಚ' ರಾಜ್ಯಗಳ ಎಲೆಕ್ಷನ್​ ರಿಸಲ್ಟ್ ​: ವಿಜಯಲಕ್ಷ್ಮಿ ಮೋದಿಗೋ? ದೀದಿಗೋ?

Last Updated : May 2, 2021, 10:53 AM IST

ABOUT THE AUTHOR

...view details