ಕರ್ನಾಟಕ

karnataka

ETV Bharat / state

ಸಿದ್ದಗಂಗಾ ಮಠದಲ್ಲಿ ಹತ್ತನೇ ತರಗತಿ ಆರಂಭ: ಶ್ರೀ ಸಿದ್ದಲಿಂಗ ಶ್ರೀ ಘೋಷಣೆ - ಆನ್​ಲೈನ್ ತರಗತಿ

ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಶಾಲೆಗಳಲ್ಲಿ ಸ್ವಚ್ಚತೆ, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಾಲೆಗಳಲ್ಲಿ ಶುದ್ದ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

siddhaganga school
siddhaganga school

By

Published : Dec 31, 2020, 10:30 PM IST

ತುಮಕೂರು: ಸರ್ಕಾರದ ಸೂಚನೆಯಂತೆ ಸಿದ್ದಗಂಗಾ ಮಠದಲ್ಲೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಆರಂಭವಾಗಲಿದೆ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಜನವರಿ ವೇಳೆಗೆ ಮುಕ್ಕಾಲು ಭಾಗ ಪಾಠ ಪ್ರವಚನ ಮುಕ್ತಾಯವಾಗಬೇಕಿತ್ತು. ಆದ್ರೆ ಈ ಬಾರಿ ಜನವರಿಯಲ್ಲಿ ಪ್ರಾರಂಭವಾಗುತ್ತಿದೆ‌ ಎಂದರು.

ಸಿದ್ದಗಂಗಾಮಠದಲ್ಲಿ ಹತ್ತನೇ ತರಗತಿ ಆರಂಭ

ಕೋವಿಡ್ ನಿಯಮಗಳನ್ನು ಪಾಲನೆ ಮಾಡಬೇಕು. ಶಾಲೆಗಳಲ್ಲಿ ಸ್ವಚ್ಚತೆ, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಾಲೆಗಳಲ್ಲಿ ಶುದ್ದ ವಾತಾವರಣ ನಿರ್ಮಾಣವಾಗಬೇಕಿದೆ. ವಿದ್ಯಾರ್ಥಿಗಳು ಕೂಡ ಸರ್ಕಾರದ ನಿಯಮಗಳನ್ನ ಪಾಲನೆ ಮಾಡಬೇಕು. ಮಕ್ಕಳ ಸುರಕ್ಷತೆಗೆ ಎಲ್ಲಾ ವಿದ್ಯಾಸಂಸ್ಥೆಗಳು ಆದ್ಯತೆ ನೀಡಬೇಕು ಎಂದರು.

ಆನ್​ಲೈನ್ ತರಗತಿಯಲ್ಲಿ ಪರಿಣಾಮಕಾರಿಯಾಗಿ ಓದಲು ಸಾಧ್ಯವಿಲ್ಲ. ಒಂದು ಕಡೆ ಸೇರಿ ಕಲಿತಾಗ ಮಾತ್ರ ಪರಿಣಾಮಕಾರಿಯಾಗಿರುತ್ತೆ, ಕಲಿಕೆ ಪೂರ್ಣವಾಗಿರುತ್ತೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು.

ABOUT THE AUTHOR

...view details