ತುಮಕೂರು:ಫಿಲಿಪ್ಪೀನ್ಸ್‌ನ ಬೋರಾಕೆಸಿ ಐಲೆಂಡ್‌ನಲ್ಲಿ ನಡೆದ 7ನೇ ನ್ಯಾಕ್ ಫಿಲ್ ಏಷಿಯಾ ಚಾಂಪಿಯನ್ ಶಿಪ್- 2019 ರಲ್ಲಿ ತುಮಕೂರಿನ ಶ್ರೀಹರಿ 5ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುವ ಎನ್‌ಎಸಿ ಯೂನಿವರ್ಸಲ್ ಚಾಂಪಿಯನ್ಶಿಪ್ ವಿಶ್ವ ದೇಹದಾರ್ಢ್ಯ ಸ್ಪರ್ಧೆಗೆ ಅರ್ಹತೆ ಹೊಂದಿದ್ದಾರೆ.
ಫಿಲಿಪ್ಪೀನ್ಸ್‌ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆ: 5ನೇ ಸ್ಥಾನ ಪಡೆದ ತುಮಕೂರಿನ ಶ್ರೀಹರಿ
ಫಿಲಿಪ್ಪೀನ್ಸ್‌ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತುಮಕೂರಿನ ಶ್ರೀಹರಿ 5ನೇ ಸ್ಥಾನ ಪಡೆದಿದ್ದು, ಭಾರತದ ಹಾಗೂ ಕರ್ನಾಟಕದ ಹಿರಿಮೆ ಹೆಚ್ಚಿಸುವಂತೆ ಮಾಡಿದೆ. ಈ ಮೂಲಕ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯುವ ಎನ್‌ಎಸಿ ಯೂನಿವರ್ಸಲ್ ಚಾಂಪಿಯನ್ಶಿಪ್ ವಿಶ್ವ ದೇಹದಾಢ್ಯ ಸ್ಪರ್ಧೆಗೆ ಶ್ರೀಹರಿ ಆಯ್ಕೆಯಾಗಿದ್ದಾರೆ.
ಬಹುಮಾನ ವಿಜೇತ ಶ್ರೀಹರಿ
ಶ್ರೀಹರಿ 2017 ರಲ್ಲಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಬೆಂಗಳೂರು, ಮಿಸ್ಟರ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದು, ಮಿಸ್ಟರ್ ಇಂಡಿಯಾದಲ್ಲಿ ಕಂಚಿನ ಪದಕ ಹಾಗೂ ಮೈಸೂರಿನಲ್ಲಿ ನಡೆದ ವಿಟಿಯು ಮತ್ತು ದಸರಾ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ಈ ಎಲ್ಲಾ ಸಾಧನೆಗಳೊಂದಿಗೆ 2018ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದ ಮಿಸ್ಟರ್ ವರ್ಲ್ಡ್ ಅಂತರಾಷ್ಟ್ರೀಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದು ಅಲ್ಲಿಯೂ ವಿಶ್ವದ ಟಾಪ್ 10 ರಲ್ಲಿ 7ನೇ ಸ್ಥಾನವನ್ನು ಪಡೆದಿರೋ ಕೀರ್ತಿ ಇವರಿಗೆ ಸಲ್ಲುತ್ತದೆ.