ತುಮಕೂರು: ಜನವರಿ 21 ರಿಂದ 26ರವರೆಗೆ ಮೈಸೂರಿನಲ್ಲಿ ನಡೆಯುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾಮಹೋತ್ಸವದ ಪ್ರಚಾರದ ವಾಹನ ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠ ತಲುಪಿತು.
ತುಮಕೂರಿಗೆ ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಪ್ರಚಾರದ ವಾಹನ.. - ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಪ್ರಚಾರದ ವಾಹನ ಸುದ್ದಿ
ಮೈಸೂರಿನಲ್ಲಿ ನಡೆಯುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾಮಹೋತ್ಸವದ ಪ್ರಚಾರದ ವಾಹನ ಇಂದು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಆಗಮಿಸಿತ್ತು.
![ತುಮಕೂರಿಗೆ ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾಮಹೋತ್ಸವ ಪ್ರಚಾರದ ವಾಹನ.. fair](https://etvbharatimages.akamaized.net/etvbharat/prod-images/768-512-5392380-thumbnail-3x2-surya.jpg)
ಮುಂದಿನ ತಿಂಗಳು ಮೈಸೂರಿನಲ್ಲಿ ನಡೆಯುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಸುತ್ತೂರು ಶ್ರೀ ಕ್ಷೇತ್ರ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ ಜಾತ್ರಾ ಮಹೋತ್ಸವದ ಪ್ರಚಾರದ ರಥ ಇಂದು ಸಿದ್ದಗಂಗಾ ಕ್ಷೇತ್ರಕ್ಕೆ ಆಗಮಿಸಿತ್ತು. ಈ ರಥದಲ್ಲಿ ಜನವರಿ 21ರಿಂದ 26ರವರೆಗೆ ನಡೆಯುವ ಜಾತ್ರಾ ಸಮಯದಲ್ಲಿನ ಕಾರ್ಯಕ್ರಮಗಳ ಬಗ್ಗೆ ಭಿತ್ತಿ ಪತ್ರಗಳ ಮೂಲಕ ಮಾಹಿತಿ ನೀಡಲಾಗಿದೆ. ಅಲ್ಲದೆ ಕಳೆದ ಬಾರಿ ಜಾತ್ರಾ ಸಮಯದಲ್ಲಿ ನಡೆದ ಕಾರ್ಯಕ್ರಮಗಳ ಬಗೆಗಿನ ವಿವಿಧ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ.
ಸುತ್ತೂರು ಜಾತ್ರಾ ಮಹೋತ್ಸವ ಮೈಸೂರಿನಲ್ಲಿ ನಡೆಯುವ ವಿಶೇಷ ಜಾತ್ರಾ ಮಹೋತ್ಸವವಾಗಿದೆ. ಪ್ರತಿ ವರ್ಷವೂ ಸಹ ಒಂದು ವಾರಗಳ ಕಾಲ ಈ ಜಾತ್ರಾ ಮಹೋತ್ಸವವನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ, ಜಾತ್ರಾ ಸಮಯದಲ್ಲಿ ನಡೆಯುವಂತಹ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತಿಳಿಸಲು ಈ ರಥ ನಾಡಿನಾದ್ಯಂತ ಸಂಚರಿಸಲಿದೆ ಎಂದು ಸ್ವಾಮೀಜಿಗಳು ತಿಳಿಸಿದ್ರು.