ತುಮಕೂರು :ಶಿವೈಕ್ಯ ಶ್ರೀ ಶಿವಕುಮಾರ ಶ್ರೀಗಳ 3ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ಮುಂಜಾನೆಯಿಂದಲೇ ಪೂಜಾ ವಿಧಿ-ವಿಧಾನಗಳು ನಡೆಯುತ್ತಿವೆ.
ಶ್ರೀಗಳ ಗದ್ದುಗೆ ನೋಡಲು ಸಾಲಿನಲ್ಲಿ ಭಕ್ತರು ಬರುತ್ತಿದ್ದಾರೆ. ಅಲ್ಲದೇ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಅಲಂಕಾರದ ನಡುವೆ ಗಮನ ಸೆಳೆದದ್ದು ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಇಷ್ಟವಾದಂತಹ ಪಪ್ಪಾಯಿ ಹಣ್ಣು.
ಸ್ವಾಮೀಜಿ ತಮ್ಮ ಭೋಜನದಲ್ಲಿ ಯಾವಾಗಲೂ ಹೆಚ್ಚಾಗಿ ಪಪ್ಪಾಯಿ ಹಣ್ಣನ್ನು ಸೇವಿಸುತ್ತಿದ್ದರು. ಹೀಗಾಗಿ, ಅವರ ಗದ್ದುಗೆ ಬಳಿ ಈ ಹಣ್ಣನ್ನು ಇಡಲಾಗಿದೆ. ವಿವಿಧ ಪುಷ್ಪಗಳಿಂದ ಗದ್ದುಗೆಯ ಹೊರ ಭಾಗ ಕಂಗೊಳಿಸುತ್ತಿದೆ.