ತುಮಕೂರು:ಕೊರೊನಾ ವೈರಸ್ ಶಂಕಿತರನ್ನು ಪರೀಕ್ಷಿಸುವುದೇ ದೊಡ್ಡ ಸವಾಲಾಗಿತ್ತು. ಆದರೆ ಇದೀಗ ಈ ಬಿಕ್ಕಟ್ಟಿನಿಂದ ಪಾರಾಗಲು ತುಮಕೂರು ಜಿಲ್ಲಾಸ್ಪತ್ರೆ ನೂತನ ಘಟಕ ತೆರೆದಿದ್ದು, ಶಂಕಿತರ ಪರೀಕ್ಷೆ ಸುಲಭವಾಗಿದೆ.
ಕೊರೊನಾ ಶಂಕಿತರ ಗಂಟಲು ದ್ರವ ತೆಗೆಯಲು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ
ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಗಂಟಲು ದ್ರವ ತೆಗೆಯಲು ವಿಶೇಷ ಘಟಕವೊಂದನ್ನು ತೆರೆಯಲಾಗಿದೆ. ಈ ಹಿಂದೆ ವೈದ್ಯಕೀಯ ಪರಿಕರಗಳು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದ್ದವು. ಹೀಗಾಗಿ ಹೊರೆ ತಪ್ಪಿಸಲು ತುಮಕೂರು ಜಿಲ್ಲಾಡಳಿತ ವಿಶೇಷ ಘಟಕ ಸ್ಥಾಪಿಸಿದೆ.

ದುಬಾರಿಯಾಗಿರುವ ಪಿಪಿಇಗಳ ಬಳಕೆ ಇಳಿಮುಖವಾಗಿ ಉಳಿತಾಯ ಮಾಡಲಾಗುತ್ತಿದೆ. ಬೂತ್ ಒಳಗೆ ವೈದ್ಯಕೀಯ ಸಿಬ್ಬಂದಿ ತೆರಳಿ ರೋಗಿಯ ಗಂಟಲಿನ ದ್ರವ ತೆಗೆಯುತ್ತಾರೆ. ನಂತರ ಅದನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುತ್ತಿದೆ. ಈ ಮಾದರಿಯ ಬೂತ್ಗಳ ಉಪಯೋಗವನ್ನು ಗಮನಿಸಿ ತಾಲೂಕು ಆಸ್ಪತ್ರೆಗಳಲ್ಲಿ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ತಿಳಿಸಿದ್ದಾರೆ.