ಕರ್ನಾಟಕ

karnataka

ETV Bharat / state

ಚುನಾವಣೆಯಲ್ಲಿ ಮುಖಂಡರು ಹಣ ಪಡೆದ ಹೇಳಿಕೆ ವಿಚಾರ... ದರ್ಶನ್​ ವಿರುದ್ಧ ದೂರು ಸಲ್ಲಿಸಿದ ಕಾಂಗ್ರೆಸ್​​

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಆರ್ ರಾಜೇಂದ್ರ, ಸಂಸದ ಮುದ್ದಹನುಮೇಗೌಡ 172 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಾಡಿಸಿಕೊಂಡಿದ್ದಾರೆ ಎಂಬ ಮಾತನ್ನು ಹೇಳಿರುವ ಆತನೊಂದಿಗೆ ಇದನ್ನು ಯಾರಾದ್ರೂ ಪ್ರಸ್ತಾಪಿಸಿರಲೇಬೇಕು.

ಕೆ.ಆರ್ ರಾಜೇಂದ್ರ

By

Published : Apr 28, 2019, 5:14 AM IST

Updated : Apr 28, 2019, 6:31 AM IST

ತುಮಕೂರು:ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಉಂಟು ಮಾಡಿರುವ ಪಕ್ಷದ ಸೋಶಿಯಲ್ ಮೀಡಿಯಾದ ಕಾರ್ಯಕರ್ತ ದರ್ಶನ್ ಎಂಬಾತನ ಕಾಂಗ್ರೆಸ್ ಮುಖಂಡರು ಚುನಾವಣೆಯಲ್ಲಿ ಮೂರುವರೆ ಕೋಟಿ ರೂ ಹಣ ಪಡೆದಿದ್ದಾರೆ ಎಂಬ ಹೇಳಿಕೆಯ ಹಿಂದೆ ಯಾರ ಕೈವಾಡವಿದೆ ಎಂಬುದು ಬಹಿರಂಗವಾಗಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಆರ್ ರಾಜೇಂದ್ರ ತಿಳಿಸಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂಸದ ಮುದ್ದಹನುಮೇಗೌಡ 172 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಾಡಿಸಿಕೊಂಡಿದ್ದಾರೆ ಎಂಬ ಮಾತನ್ನು ಹೇಳಿರುವ ಆತನೊಂದಿಗೆ ಇದನ್ನು ಯಾರಾದ್ರೂ ಪ್ರಸ್ತಾಪಿಸಿರಲೇಬೇಕು.

3.5 ಕೋಟಿ ರೂ.ನ್ನು ಇಬ್ಬರು ಕಾಂಗ್ರೆಸ್ ಮುಖಂಡರು ನೀಡಿದ್ದಾರೆ ಮತ್ತು ದೇವೇಗೌಡರು ಗೆದ್ದ ನಂತರ ಹಣ ಸಂದಾಯವಾಗಲಿದೆ ಎಂಬ ಮಾತನ್ನು ಹೇಳಿದ್ದು ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರಬೇಕು ಎಂದು ತಿಳಿಸಿದರು.

ಈ ರೀತಿಯ ಬೆಳವಣಿಗೆಯಿಂದ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗುತ್ತಿದೆ. ಸಂಸದ ಮುದ್ದಹನುಮೇಗೌಡ ಹಾಗೂ ಕೆ.ಎನ್ ರಾಜಣ್ಣ ಅಭಿಮಾನಿಗಳಿಗೆ ಬೇಸರವಾಗಿದೆ ಅಲ್ಲದೆ ಆಕ್ರೋಶಗೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು:

ಇದೇ ವೇಳೆ ಕೇಂದ್ರ ರಾಜಣ್ಣ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಎಸ್ಪಿ ಕಚೇರಿಗೆ ತೆರಳಿ ದರ್ಶನ್ ವಿರುದ್ಧ ದೂರು ನೀಡಿದರು. ದರ್ಶನ್ ಮಾತುಗಳು ಸಂಚಿ ನಿಂದ ಕೂಡಿವೆ. ರಾಜಣ್ಣ ಹಾಗೂ ಮುದ್ದಹನುಮೇಗೌಡರ ಹೆಸರಿಗೆ ಮಸಿ ಬಳಿಯುವ ದುರುದ್ದೇಶ ಅಡಗಿದೆ. ಈ ಈ ಕೃತ್ಯ ಬೇಕಂತಲೇ ಆಗಿದೆ. ಇದರ ಹಿಂದೆ ಸಂಚು ಹಾಗೂ ಬೇರೆ ಯಾರದ್ದೋ ಕೈವಾಡವಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Last Updated : Apr 28, 2019, 6:31 AM IST

ABOUT THE AUTHOR

...view details