ಕರ್ನಾಟಕ

karnataka

ETV Bharat / state

ನಂಜನಗೂಡು ಜುಬಲಿಯಂಟ್ ಕಾರ್ಖಾನೆಗೆ ಆಡಿಟರ್ಸ್​ಗಳಿಂದ ಸೋಂಕು.. ಸಚಿವ ಸೋಮಶೇಖರ್ ಶಂಕೆ!! - Minister of Co-operatives and Agriculture, ST. Somashekhar

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

Somashekhar
ಎಸ್​.ಟಿ ಸೊಮಶೇಖರ್

By

Published : Apr 13, 2020, 1:37 PM IST

ತುಮಕೂರು :ನಂಜನಗೂಡಿನ ಜುಬಲಿಯಂಟ್ ಕಾರ್ಖಾನೆಗೆ ಲೆಕ್ಕಪರಿಶೋಧಕರು ಹೊರಗಡೆಯಿಂದ ಬರುತ್ತಾರೆ. ಅವರುಗಳಿಂದ ಕೊರೊನಾ ವೈರಸ್ ಸೋಂಕು ಹರಡಿರುವ ಶಂಕೆ ಇದೆ ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ನಿನ್ನೆ ಕೂಡ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಕಾರ್ಖಾನೆಯಲ್ಲಿರುವ 1500 ಮಂದಿ ಕಾರ್ಮಿಕರನ್ನು ಈಗಾಗಲೇ ಪ್ರತ್ಯೇಕಿಸಿರುವುದೂ ಸೇರಿದಂತೆ ಇಡೀ ನಂಜನಗೂಡನ್ನು ಸಂಪೂರ್ಣ ನಿಗಾವಹಿಸಲಾಗಿದೆ. ಅಲ್ಲದೇ ಕೊರೊನಾ ನಿಯಂತ್ರಣಕ್ಕೂ ಬರುತ್ತದೆ ಎಂಬ ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ನಂಜನಗೂಡಿನಲ್ಲಿರುವ ಕೊರೊನಾ ಆತಂಕದ ಕುರಿತಂತೆ ಸಚಿವ ಎಸ್‌ ಟಿ ಸೊಮಶೇಖರ್ ಮಾಹಿತಿ..

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈಗಾಗಲೇ ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಯಾನಿಟೈಸರ್ ಮಾರ್ಗಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸುವಂತೆ ಕೂಡ ಸೂಚಿಸಲಾಗಿದೆ ಎಂದಿದ್ದಾರೆ.

For All Latest Updates

ABOUT THE AUTHOR

...view details