ದಾವಣಗೆರೆ/ತುಮಕೂರು:ಕಂಕಣ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ದಾವಣಗೆರೆ, ತುಮಕೂರು, ಹಾವೇರಿ, ಬೀದರ್ ನಗರಗಳಲ್ಲಿನ ಬಹುತೇಕ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ.
ಕಂಕಣ ಸೂರ್ಯಗ್ರಹಣ ಹಿನ್ನೆಲೆ: ಬಹುತೇಕ ದೇಗುಲಗಳು ಬಂದ್ - ಹಣ ಕಾಲದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು
ಕಂಕಣ ಸೂರ್ಯಗ್ರಣ ಹಿನ್ನೆಲೆ, ದಾವಣಗೆರೆ, ತುಮಕೂರು ಸೇರಿದಂತೆ ಇತರ ನಗರಗಳಲ್ಲಿ ಬೆಳಿಗ್ಗೆಯೇ ದೇವರಿಗೆ ಪೂಜೆ ಸಲ್ಲಿಸಿ ಗ್ರಹಣ ಕಾಲದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು.
ದಾವಣಗೆರೆಯ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗ್ಗೆ 5.30ಕ್ಕೆ ಮಹಾ ಮಂಗಳಾರತಿ ನಂತರ ದೇಗುಲದ ಬಾಗಿಲನ್ನು ಮುಚ್ಚಿದರು. ಇನ್ನು ಹಾವೇರಿ, ಬೀದರ್ ಸೇರಿದಂತೆ ಇತರ ನಗರಗಳಲ್ಲಿಯೂ ಗ್ರಹಣ ಸ್ಪರ್ಶ ಕಾಲದ ವೇಳೆಗೆ ದೇವಾಲಯದ ಬಾಗಿಲುಗಳು ಮುಚ್ಚಿದ್ದು, ಗ್ರಹಣದ ನಂತರ ದೇವಾಲಯದ ಬಾಗಿಲುಗಳನ್ನು ತೆರೆಯುವುದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ದಾವಣಗೆರೆಯಲ್ಲಿ ಬೆಳಗ್ಗೆ 11.30 ರ ನಂತರ ದೇವಸ್ಥಾನದ ಶುದ್ಧೀಕರಣ ಮಾಡಿ ನಂತರ ದೇವರಿಗೆ ಮಹಾಭಿಷೇಕ ಮಾಡಲಾಗುವುದು ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದು, ತುಮಕೂರಿನಲ್ಲಿ ಮಧ್ಯಾಹ್ನ 3.30ರ ನಂತರ ದೇವಸ್ಥಾನದ ಬಾಗಿಲು ತೆರೆಯುವುದಾಗಿ ಆಡಳಿತ ಮಂಡಳಿ ತಿಳಿಸಿದೆ.