ಕರ್ನಾಟಕ

karnataka

ETV Bharat / state

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸೊಗಡು ಶಿವಣ್ಣ ಟೀಕೆ - ಸಿದ್ದರಾಮಯ್ಯ ವಿರುದ್ಧ ಸೊಗಡು ಶಿವಣ್ಣ ಆಕ್ರೋಶ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ..

Sogadu Shivanna reaction on siddaramaiah statement
ಸಿದ್ದರಾಮಯ್ಯ ಹೇಳಿಕೆಗೆ ಸೊಗಡು ಶಿವಣ್ಣ ಪ್ರತಿಕ್ರಿಯೆ

By

Published : Mar 26, 2022, 2:18 PM IST

ತುಮಕೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಪ್ರತಿಕ್ರಿಯಿಸಿದ್ದು, ಏಕವಚನದಲ್ಲಿ ಟೀಕಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸೊಗಡು ಶಿವಣ್ಣ ಪ್ರತಿಕ್ರಿಯೆ ನೀಡಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಬಗೆಗೆ ಮಾತನಾಡಲು ಅವರಿಗೆ ಯಾವ ಹಕ್ಕಿದೆ. ನಮ್ಮದೇ ರಕ್ತವನ್ನು ಮೀರ್ ಸಾಧಿಕ್​ ರಕ್ತಕ್ಕೆ ಬದಲಾಯಿಸಿದ್ದಾರೆ. ಕನಕದಾಸರ ಹೆಸರು ಹೇಳಲೂ ಸಿದ್ದರಾಮಯ್ಯನವರಿಗೆ ಯಾವುದೇ ಹಕ್ಕಿಲ್ಲ. ಸ್ವಾಮೀಜಿಗಳ ವಿರುದ್ಧ ಮಾತಾಡಿ ಜಾತ್ರೆಯಲ್ಲಿ ಕುಣಿತಾರೆ ಎಂದು ಕಟುವಾಗಿ ಟೀಕಿಸಿದರು.

ಸಿದ್ದರಾಮಯ್ಯನವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಕ್ಕಲಿಗ,‌ ಲಿಂಗಾಯತ, ಹಿಂದುಳಿದ ವರ್ಗ ಎಲ್ಲಾ ಒಡೆದು ಚೂರು ಆಗಿಸಲು ಹೊರಟಿದ್ದಾರೆ. ಮುಂದಿನ ದಿನದಲ್ಲಿ ಧರ್ಮದ್ರೋಹಿ, ದೇಶದ್ರೋಹಿಗಳಿಗೆ ನಾವೆಲ್ಲ ದೇವಸ್ಥಾನಗಳಲ್ಲಿ ಬಹಿಷ್ಕರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಸಣ್ಣ ಮಾತುಗಳನ್ನಾಡಿದ್ದಾರೆ, ತಕ್ಷಣ ಕ್ಷಮೆಯಾಚಿಸಬೇಕು: ರಂಭಾಪುರಿ ಶ್ರೀ!

For All Latest Updates

TAGGED:

ABOUT THE AUTHOR

...view details