ತುಮಕೂರು: ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣದಲ್ಲಿ ಭಾಗಿಯಾದವರನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಪ್ರಕರಣ ಪ್ರೀ ಪ್ಲಾನ್ ಮಾಡಿಕೊಂಡಿರುವಂತಿದೆ. ಪ್ರಕರಣದಲ್ಲಿ 6 ಮಂದಿ ಮುಸಲ್ಮಾನರು, ಇನ್ನುಳಿದಂತೆ ಹಿಂದೂಗಳು ಭಾಗಿಯಾಗಿದ್ದಾರೆ. ಇವರೆಲ್ಲ ಏನು ಸಿವಿಲ್ ಉಗ್ರಗಾಮಿಗಳಾ? ಹಾಸನ, ದಾವಣಗೆರೆ, ಬೆಂಗಳೂರು ಸೇರಿ ಹಲವೆಡೆಯಿಂದ ಜನರನ್ನು ಕಳುಹಿಸಿ ಕೃತ್ಯ ನಡೆಸಿದ್ದಾರೆ ಎಂದು ದೂರಿದರು.
ಸಚಿವ ನಾಗೇಶ್ ಮನೆಗೆ ನುಗ್ಗಿ ದಾಂಧಲೆ ನಡೆಸಿದವರಿಗೆ ಕಂಡಲ್ಲಿ ಗುಂಡಿಕ್ಕಿ: ಸೊಗಡು ಶಿವಣ್ಣ - ಸಚಿವ ನಾಗೇಶ್ ಮನೆ ಮೇಲೆ ದಾಳಿ
ಶಿಕ್ಷಣ ಸಚಿವ ನಾಗೇಶ್ ಅವರ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿರುವ ಪ್ರಕರಣದಲ್ಲಿ ಭಾಗಿಯಾದವರನ್ನು ಕಂಡಲ್ಲಿ ಗುಂಡಿಕ್ಕಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ
ಸಚಿವರ ಮಗ ಶಾಕ್‌ಗೊಳಗಾಗಿ ಮನೆಯಿಂದ ಹೊರ ಬಂದಿಲ್ಲ. ಸರ್ಕಾರಕ್ಕೆ ಪೊಲೀಸರಿಗೆ ನೇರವಾಗಿ ಹೇಳುತ್ತೇನೆ, ಇಂತಹವರಿಗೆ ಕೇವಲ ಶಿಕ್ಷೆ ಅಲ್ಲ, ಕಂಡಲ್ಲಿ ಗುಂಡು ಅಂತಿವಲ್ಲ ಅದನ್ನು ಮಾಡಬೇಕು ಎಂದರು. ನಾಲ್ಕರಲ್ಲಿ ಇನ್ನೆರಡು ವಾಹನ ಎಲ್ಲಿ, ಅದರಲ್ಲಿ ವೆಪನ್ ಇದ್ದವು. ವೆಪನ್ ಇದ್ದ ವೆಹಿಕಲ್ ಅನ್ನು ಈವರೆಗೂ ಹಿಡಿದಿಲ್ಲ ಎಂದರು.
ಇದನ್ನೂ ಓದಿ:ಅನಂತರಾಜು ಆತ್ಮಹತ್ಯೆ ಕೇಸ್ಗೆ ಮತ್ತೊಂದು ಟ್ವಿಸ್ಟ್: 2 ಸಲ ಗರ್ಭಪಾತ ಮಾಡಿಸಿಕೊಂಡಿದ್ದ ರೇಖಾ!