ತುಮಕೂರು: ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಹಿನ್ನೆಲೆ ತುಮಕೂರು ನಗರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ. ನಗರದಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಅವರು, ಏ.20 ಗುರುವಾರದಂದು ನಾಮಪತ್ರ ಸಲ್ಲಿಸುತ್ತೇನೆ ಎಂದರು. ಇವತ್ತಿನಿಂದ ಹೊಸ ಅಧ್ಯಾಯ ಶುರು ಆಗುತ್ತಿದೆ. ನಾನು ಸ್ವಾಭಿಮಾನಿ, ನನ್ನ ಜೊತೆಯಲ್ಲಿರುವವರು ಕೂಡ ಸ್ವಾಭಿಮಾನಿಗಳು. ಎಲ್ಲರೂ ಸ್ವತಂತ್ರ್ಯ ಅಭರ್ಥಿಯಾಗಿ ಸ್ಪರ್ಧೆ ಮಾಡುವಂತೆ ಹೇಳಿದ್ದಾರೆ. ಹೀಗಾಗಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿನಿ. ಶಾಂತಿ ಮಂತ್ರ, ಸಮಾನತೆ ಮಂತ್ರ ಜಪಿಸುತ್ತೇನೆ, ಭ್ರಷ್ಟಾಚಾರ ಮುಕ್ತವಾಗಿರಬೇಕು ಎಂದೂ ಇದೇ ವೇಳೆ ಹೇಳಿದರು.
ನಾನು ಇನ್ಮೇಲೆ ಮನೆ ಮನೆಗೆ ತೆರಳಿ ಮತ ಕೇಳುತ್ತೇನೆ. ಎರಡು ಜೋಳಿಗೆ ಹಿಡಿದು ಹೋಗುತ್ತೇನೆ, ಹಿಂದೆ ಋಷಿ ಮುನಿಗಳು ಜೋಳಿಗೆ ಹಿಡಿದು ಮಠಮಾನ್ಯಗಳ ಅಭಿವೃದ್ದಿಗೆ ಹೋಗುತ್ತಿದ್ದರು. ನಾನು ಹಾಗೆ ಜೋಳಿಗೆ ಹಿಡಿದು ಹೋಗುತ್ತಿದ್ದೇನೆ. ಒಂದು ವೋಟು, ಇನ್ನೊಂದು ನೋಟಿಗಾಗಿ ಜೋಳಿಗೆ ಹಾಕಿದ್ದೇನೆ. ನಾನು ಯಾವತ್ತು ಸ್ವಜನ ಪಕ್ಷಪಾತ ಮಾಡೋದಿಲ್ಲ. ಕರಪತ್ರಗಳನ್ನ ಮನೆ ಮನೆಗೂ ಕೂಡುತ್ತೇನೆ ಎಂದು ಶಿವಣ್ಣ ಇದೇ ವೇಳೆ ಹೇಳಿದರು.
1994 ರಲ್ಲಿ ಕಾಂಗ್ರೆಸ್ನವರು ನಮ್ಮನ್ನು ಜೈಲಿಗೆ ಕಳುಹಿಸಿದ್ದರು, ಅದರು ಸಹ ಕಾಂಗ್ರೆಸ್ ಎಂಎಲ್ಎಗಳು ಮತ್ತು ಆಗ ಮುಖ್ಯಮಂತ್ರಿಗಳಾಗಿದ್ದ ಎಸ್ ಎಂ ಕೃಷ್ಣ ಮತ್ತು ಧರ್ಮಸಿಂಗ್ ನಾನು ಕೇಳಿದಂತ ಒಳ್ಳೆಯ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಒಮ್ಮೆ ಶಾಸಕನಾದ ನಂತರ ಇಡೀ ರಾಜ್ಯದ ವ್ಯವಸ್ಥೆಯೊಳಗೆ ಬದುಕಬೇಕಾಗುತ್ತದೆ ಅದಕ್ಕಾಗಿ ನಾನು ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿದ್ದೇನೆ ಎಂದರು.