ತುಮಕೂರು: ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ ಹೆಬ್ಬಾವನ್ನು ಕಂಡು ಕೆಲಕಾಲ ಗ್ರಾಮಸ್ಥರು ಬೆಚ್ಚಿಬಿದ್ದ ಘಟನೆ ಕುಣಿಗಲ್ ತಾಲೂಕಿನ ಹಳೇಪೇಟೆ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಮನೆ ಬಾಗಿಲಿಗೇ ಬಂತು ಹೆಬ್ಬಾವು...! - undefined
ಹೆಬ್ಬಾವೊಂದು ಮನೆ ಮುಂದೆ ಪ್ರತ್ಯಕ್ಷವಾಗಿ ಜನರನ್ನು ಆತಂಕಗೊಳಿಸಿರುವ ಘಟನೆ ಕುಣಿಗಲ್ ತಾಲೂಕಿನ ಹಳೇಪೇಟೆ ಗ್ರಾಮದಲ್ಲಿ ನಡೆದಿದೆ.

ಹೆಬ್ಬಾವು
ಹಳೇಪೇಟೆ ಗ್ರಾಮದಲ್ಲಿ ಪ್ರತ್ಯಕ್ಷವಾದ ಹೆಬ್ಬಾವು
ದಿಢೀರ್ ಮನೆ ಮುಂದೆ ಪ್ರತ್ಯಕ್ಷವಾಗಿದ್ದ ಸುಮಾರು 8 ಅಡಿ ಉದ್ದದ ಹಾವನ್ನ ಕಂಡು ಜನರು ಗಾಬರಿಗೊಂಡಿದ್ದಾರೆ. ತಕ್ಷಣ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ರಕ್ಷಕ ಚೇತನ್ ನೀರಿನ ಟ್ಯಾಂಕ್ ಹಿಂದೆ ಅವಿತುಕೊಂಡಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ನಂತರ ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಅಲ್ಲದೆ ಅಧಿಕಾರಿಗಳು ಹೆಬ್ಬಾವನ್ನು ಹುಲಿಯೂರುದುಗ೯ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.