ಕರ್ನಾಟಕ

karnataka

ETV Bharat / state

ಆಮೆಗತಿಯಲ್ಲಿದ್ದ ಸ್ಮಾರ್ಟ್​ ಸಿಟಿ ಯೋಜನೆ .. ಲಾಕ್​​​ಡೌನ್​ನಿಂದಾಗಿ ಸ್ಲೋ ಸಿಟಿ ಯೋಜನೆಯಾಯ್ತು..!

ಲಾಕ್​ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿರುವುದರ ಜೊತೆಗೆ ಸರ್ಕಾರದ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳು ಸ್ಥಗಿತವಾಗಿವೆ. ತುಮಕೂರಿನಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿದ್ದ ಕಾಮಗಾರಿಗೂ ಕೂಡಾ ತಡೆಯುಂಟಾಗಿದೆ.

smart city
ಸ್ಮಾರ್ಟ್​ ಸಿಟಿ ಯೋಜನೆ

By

Published : Apr 13, 2020, 5:49 PM IST

ತುಮಕೂರು:ಜಿಲ್ಲೆಯಲ್ಲಿ ನಡೆಯಬೇಕಿದ್ದ ಕಾಮಗಾರಿಗಳು ಕೆಲವು ವರ್ಷಗಳಿಂದ ನಡೆಯುತ್ತಿದ್ದ ಸ್ಮಾರ್ಟ್​ ಸಿಟಿ ಕಾಮಗಾರಿಗಳಿಗೆ ತಡೆಯುಂಟಾಗಿದೆ. ಸುಮಾರು 60 ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅದರಲ್ಲಿ ಸ್ಮಾರ್ಟ್ ಲೈಬ್ರರಿ, ಸ್ಮಾರ್ಟ್ ರೋಡ್, ರಿಂಗ್ ರೋಡ್, ವಿವಿಧ ಇಲಾಖೆಗಳ ಕಟ್ಟಡಗಳು, ಬಸ್ ನಿಲ್ದಾಣದ ಕಾಮಗಾರಿಗಳೂ ಸೇರಿವೆ.

ಸುಮಾರು 750 ಕೋಟಿ ರೂ. ಕಾಮಗಾರಿಗಳು ಇವಾಗಿದ್ದು, ಲಾಕ್​ಡೌನ್​ನಿಂದ ಈ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಭೂಬಾಲನ್​ ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದ ಕಾಮಗಾರಿಗಳೂ ನಿಂತುಹೋಗಿವೆ.

ಸ್ಮಾರ್ಟ್​ ಸಿಟಿ ಯೋಜನೆ

ಜಿಲ್ಲೆಯ ಮೂಲಕ ಹಾದು ಹೋಗುತ್ತಿರುವ ಎತ್ತಿನಹೊಳೆ ಕಾಮಗಾರಿ ಯೋಜನೆ ಕೂಡ ಸ್ಥಗಿತಗೊಂಡಿದೆ. ಕೊರಟಗೆರೆ ಬಳಿ ನಡೆಯುತ್ತಿದ್ದ ಪೈಪ್​​ಲೈನ್ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿಲ್ಲ. ಬದಲಾಗಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಒಂದೆಡೆ ಕಾಲ ಕಳೆಯುತ್ತಿದ್ದಾರೆ.

ಇನ್ನು ಲಾಕ್​​ಡೌನ್ ವಿಷಯ ತಿಳಿಯುತ್ತಿದ್ದಂತೆ ಗುತ್ತಿಗೆದಾರರು ಬಹುತೇಕ ಎಲ್ಲ ಕಾರ್ಮಿಕರನ್ನು ಅವರವರ ಊರುಗಳಿಗೆ ವಾಪಸ್ ಕಳುಹಿಸಿಕೊಟ್ಟಿದ್ದಾರೆ. ಇನ್ನು ಕೆಲವರನ್ನು ಒಂದೆಡೆ ಇರಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಗುತ್ತಿಗೆದಾರರು ಕೂಡ ವಾಪಸ್​​​ ಹೊರಟು ಹೋಗಿದ್ದಾರೆ.

ABOUT THE AUTHOR

...view details