ಕರ್ನಾಟಕ

karnataka

ETV Bharat / state

ಹಾಡಹಗಲೇ ಮನೆ ದರೋಡೆ ಮಾಡಿದ್ದ ಖದೀಮರ ಬಂಧನ: ಚಿನ್ನಾಭರಣ ವಶ - undefined

ಹಗಲು ಹೊತ್ತಿನಲ್ಲೇ ಮನೆ ದರೋಡೆ ಮಾಡುತ್ತಿದ್ದ 6 ಜನರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ, ನಗದು- ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ತುಮಕೂರಿನ ಅರಕೆರೆ ಕ್ರಾಸ್​ನ ಮನೆಯೊಂದರಲ್ಲಿ ದರೋಡೆ ಮಾಡಿದ್ದ 6 ಜನರನ್ನು ಬಂಧಿಸಲಾಗಿದೆ

By

Published : Jul 6, 2019, 3:01 AM IST

ತುಮಕೂರು: ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಮನೆ ದರೋಡೆ ಮಾಡಿದ್ದ 6 ಮಂದಿ ದರೋಡೆಕೋರರನ್ನು ತುಮಕೂರು ಗ್ರಾಮಾಂತರ ಪೊಲೀಸರು ಬಂಧಿಸಿ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.

ತುಮಕೂರಿನ ಅರಕೆರೆ ಕ್ರಾಸ್​ನ ಮನೆಯೊಂದರಲ್ಲಿ ದರೋಡೆ ಮಾಡಿದ್ದ 6 ಜನರನ್ನು ಬಂಧಿಸಲಾಗಿದೆ.

ಇಲ್ಲಿನ ಅರಕೆರೆ ಕ್ರಾಸ್​ನಲ್ಲಿ ಮೇ 26ರಂದು ಹಗಲು ಹೊತ್ತಿನಲ್ಲಿ ಲೀಲಾವತಿ ಅವರ ಮನೆ ಬಾಡಿಗೆಯ ಮುಂಗಡ ಹಣ ಕೊಡುವ ನೆಪದಲ್ಲಿ ಒಳನುಗ್ಗಿದ 6 ಮಂದಿ, ಏಕಾಏಕಿ ಅವರನ್ನು ಹಿಡಿದು ಥಳಿಸಿ ಬಳಿಕ ಕೈ-ಕಾಲು ಕಟ್ಟಿ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದರು. ನಂತರ ಮನೆಯಲ್ಲಿದ್ದ ಬೀರುವನ್ನು ಒಡೆದು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದರು.

ತುಮಕೂರು ಗ್ರಾಮಾಂತರ ಪೊಲೀಸರು 6 ಮಂದಿ ದರೋಡೆಕೋರರನ್ನು ಬಂಧಿಸಿ 9 ಲಕ್ಷ ನಗದು, 50 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಪಿ.ವೆಂಕಟೇಶ್, ಸಂದೀಪುಡಿ ಮುರಳಿ ಮಣಿ ಸ್ವರೂಪ್, ಪಲ್ಲುಪು ತಿರುಪುತೇಂದ್ರ, ನರಸಿಂಹ ಮತ್ತು ಬೆಂಗಳೂರಿನ ವೈ.ಎಸ್.ಬಾಬು, ದಾವಣಗೆರೆಯ ಕೆಟಿ ಶಿವಾನಂದ ಪೂಜಾರಿ ಬಂಧಿತ ಆರೋಪಿಗಳು.

For All Latest Updates

TAGGED:

ABOUT THE AUTHOR

...view details