ತುಮಕೂರು:ಶಿರಾ ವಿಧಾನಸಭೆ ಉಪ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದ 17 ಮಂದಿ ಪೈಕಿ ಇಬ್ಬರು ಪಕ್ಷೇತರರು ತಮ್ಮ ಉಮೇದುವಾರಿಕೆ ವಾಪಸ್ ಪಡೆದ ಹಿನ್ನೆಲೆಯಲ್ಲಿ ಅಂತಿಮವಾಗಿ 15 ಮಂದಿ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಶಿರಾ ಉಪ ಚುನಾವಣೆ: ಅಂತಿಮವಾಗಿ ಕಣದಲ್ಲಿ 15 ಮಂದಿ ಅಭ್ಯರ್ಥಿಗಳು
ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ, ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಗಿರೀಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎಂ.ರಾಜೇಶ ಗೌಡ ಸೇರಿ ಒಟ್ಟು 15 ಜನ ಶಿರಾ ಉಪ ಚುನಾವಣೆಯ ಕಣದಲ್ಲಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ತಿಮ್ಮರಾಜ ಗೌಡ ಮತ್ತು ನಿಸಾರ್ ಅಹ್ಮದ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ, ಭಾರತ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಗಿರೀಶ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎಂ.ರಾಜೇಶ ಗೌಡ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ಬಿ.ಟಿ.ಓಬಳೇಶಪ್ಪ, ರೈತ ಭಾರತ ಪಕ್ಷ ಅಭ್ಯರ್ಥಿಯಾಗಿ ತಿಮ್ಮಕ್ಕ, ರಿಪಬ್ಲಿಕ್ ಸೇನೆ ಅಭ್ಯರ್ಥಿಯಾಗಿ ಪ್ರೇಮಕ್ಕ ಕಣದಲ್ಲಿ ಉಳಿದಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಅಮ್ರೋಸ್ ಡಿ ಮೆಲ್ಲೊ, ಆರ್.ಕಂಬಣ್ಣ, ಎಂ.ಗುರುಸಿದ್ದಪ್ಪ, ಜಯಣ್ಣ.ವೈ, ಎಲ್.ಕೆ.ದೇವರಾಜು, ಜಿ.ಎಸ್.ನಾಗರಾಜು ಸಾಧಿಕ್ ಪಾಷ ಚುನಾವಣಾ ಕಣದಲ್ಲಿದ್ದಾರೆ.