ತುಮಕೂರು:ಶಿರಾ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಈಗಾಗಲೇ ಮೂವರ ಹೆಸರನ್ನು ಹೈಕಮಾಂಡ್ಗೆ ಕಳುಹಿಸಲಾಗಿದ್ದು, ಅಂತಿಮವಾಗಿ ಇನ್ನೆರಡು ದಿನದಲ್ಲಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗಷ್ಟೇ ಪಕ್ಷ ಸೇರ್ಪಡೆಗೊಂಡಿರುವ ಡಾ. ರಾಜೇಶ್, ಮಂಜುನಾಥ್ ಮತ್ತು ಎಸ್ಆರ್ ಗೌಡ ಅವರ ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲು ಕೊಡಲಾಗಿದೆ. ಈಗಾಗಲೇ ಬೂತ್ ಮಟ್ಟದ ಪ್ರಚಾರ ಸಭೆಯನ್ನು ಕೈಗೊಳ್ಳಲಾಗಿದೆ. ಈ ಹಿಂದಿನ ಯಾವ ಶಾಸಕರು ತಲುಪದಂತಹ ಕ್ಷೇತ್ರದಲ್ಲಿನ ಸ್ಥಳಗಳಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ತೆರಳಿ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.