ಕರ್ನಾಟಕ

karnataka

ETV Bharat / state

ಕೋವಿಡ್ ಉಲ್ಬಣ : ತುಮಕೂರಿನ ಸಿಂಗಾಪುರ ಗ್ರಾಮ ಸಂಪೂರ್ಣ ಸೀಲ್‌ಡೌನ್ - ತುಮಕೂರಿನ ಸಿಂಗಾಪುರ ಗ್ರಾಮ

ಸಿಂಗಾಪುರ ಗ್ರಾಮದಲ್ಲಿ 900ರಷ್ಟು ಜನ ಸಂಖ್ಯೆಯಿದೆ. ನಿತ್ಯ ಮೂರು ತಂಡಗಳಿಂದ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ 4 ದಿನಗಳಲ್ಲಿ ಒಟ್ಟು 350 ಮಂದಿಗೆ ಪರೀಕ್ಷೆ ನಡೆಸಲಾಗಿದೆ..

Singapur Village Seal down
ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿ

By

Published : Jul 4, 2021, 11:37 AM IST

Updated : Jul 4, 2021, 12:05 PM IST

ತುಮಕೂರು :ಕೋವಿಡ್ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆ ಸರ್ಕಾರ ಹಂತ ಹಂತವಾಗಿ ಅನ್​ಲಾಕ್​ ಮಾಡುತ್ತಿದ್ದರೆ, ಜಿಲ್ಲೆಯಚಿಕ್ಕನಾಯಕನಹಳ್ಳಿ ತಾಲೂಕಿನ ಸಿಂಗಾಪುರ ಗ್ರಾಮವನ್ನು ಸಂಪೂರ್ಣ ಸೀಲ ಡೌನ್ ಮಾಡಲಾಗಿದೆ. ಇಂದಿನಿಂದ ಹತ್ತು ದಿನಗಳ ಕಾಲ ಗ್ರಾಮಕ್ಕೆ ಹೊರಗಿನವರ ಪ್ರವೇಶ ನಿಷೇಧಿಸಲಾಗಿದೆ.

ಹುಳಿಯಾರು ಹೋಬಳಿ ಯಳನಾಡು ಪಂಚಾಯತ್​ನ ಸಿಂಗಾಪುರ ಗ್ರಾಮದಲ್ಲಿ ಇದ್ದಕ್ಕಿದ್ದದಂತೆ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಿದೆ. ಹಾಗಾಗಿ, ಸೀಲ್ಡೌನ್ ಮಾಡಲಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಹೆಚ್​ಒ, ಎಡಿಸಿ, ಸಿಇಒ, ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಸೇರಿ ಇತರ ಅಧಿಕಾರಿಗಳ ದಂಡೇ ದೌಡಾಯಿಸಿದೆ.

ಗ್ರಾಮಸ್ಥರಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿ

ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಕೋವಿಡ್ ಪ್ರಕರಣ ಹೆಚ್ಚಳವಾಗ್ತಿವೆ. ವಾರದಲ್ಲಿ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಒಂದು ದಿನದ ಕೋವಿಡ್ ಪರೀಕ್ಷೆಯಲ್ಲಿ 19 ಜನರಿಗೆ ಪಾಸಿಟಿವ್ ಬಂದಿದೆ. ಸೋಂಕಿತರನ್ನು ಚಿಕ್ಕನಾಯಕನಹಳ್ಳಿ ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ಕೊಡಲಾಗ್ತಿದೆ. ಸ್ಥಳದಲ್ಲಿ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್, ತಾಲೂಕು ವೈದ್ಯಾಧಿಕಾರಿ ಮೊಕ್ಕಾಂ ಹೂಡಿದ್ದಾರೆ.

ಓದಿ : ಕೋವಿಡ್ ನಿಯಮ ಪಾಲಿಸದಿದ್ದರೆ ಹುಷಾರ್.! ನಿಮ್ಮ ಮೇಲಿರಲಿದೆ 54 ತಂಡಗಳ ಹದ್ದಿನ ಕಣ್ಣು

ಸಿಂಗಾಪುರ ಗ್ರಾಮದಲ್ಲಿ 900ರಷ್ಟು ಜನ ಸಂಖ್ಯೆಯಿದೆ. ನಿತ್ಯ ಮೂರು ತಂಡಗಳಿಂದ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ 4 ದಿನಗಳಲ್ಲಿ ಒಟ್ಟು 350 ಮಂದಿಗೆ ಪರೀಕ್ಷೆ ನಡೆಸಲಾಗಿದೆ.

ಈ ಪೈಕಿ 35 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಸೋಂಕು ಹೆಚ್ಚಳವಾದ ಹಿನ್ನೆಲೆ ಭಯಭೀತರಾಗಿರುವ ಜನರು ಸ್ವಯಂ ಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ.

Last Updated : Jul 4, 2021, 12:05 PM IST

ABOUT THE AUTHOR

...view details