ತುಮಕೂರು: ಹಿಜಾಬ್ ಕುರಿತ ನ್ಯಾಯಾಲಯದ ತೀರ್ಪು ಖಂಡಿಸಿ ತುಮಕೂರಿನಲ್ಲಿ ಪೋಷಕರೊಬ್ಬರು ತಮ್ಮ ಮಕ್ಕಳೊಂದಿಗೆ ಭಿತ್ತಿಪತ್ರಗಳನ್ನು ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ತುಮಕೂರು: ಹಿಜಾಬ್ ತೀರ್ಪು ಖಂಡಿಸಿ ಮೌನ ಪ್ರತಿಭಟನೆ - ತುಮಕೂರಿನಲ್ಲಿ ಹಿಜಾಬ್ ತೀರ್ಪಿನ ವಿರುದ್ಧ ಮೌನ ಪ್ರತಿಭಟನೆ
ತುಮಕೂರು ನಗರದ ಟೌನ್ಹಾಲ್ ವೃತ್ತದಲ್ಲಿ ಸೈಯದ್ ಅಷ್ಪಕ್ ಎಂಬುವವರು ತಮ್ಮ ಮಕ್ಕಳಾದ ರೋಸಿ ಮತ್ತು ರೋಷನ್ ಎಂಬುವರೊಂದಿಗೆ 'ಹಿಜಾಬ್ ನಮ್ಮ ಹಕ್ಕು, ಭಾರತ ಒಂದು ಜಾತ್ಯಾತೀತ ದೇಶ' ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಹಿಜಾಬ್ ತೀರ್ಪಿನ ವಿರುದ್ಧ ಮೌನ ಪ್ರತಿಭಟನೆ
ನಗರದ ಟೌನ್ಹಾಲ್ ವೃತ್ತದಲ್ಲಿ ಸೈಯದ್ ಅಷ್ಪಕ್ ಎಂಬುವವರು ತಮ್ಮ ಮಕ್ಕಳೊಂದಿಗೆ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನೆ ಮೊಟಕುಗೊಳಿಸುವಂತೆ ಸೂಚಿಸಿದರು. ಕೆಲವೇ ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದ ಮೂವರು ನಂತರ ಸ್ಥಳದಿಂದ ಹೊರಟು ಹೋದರು.
ಇದನ್ನೂ ಓದಿ:ಹೈಕೋರ್ಟ್ ಆದೇಶ ಉಲ್ಲಂಘನೆ: ಪ್ರಮಾಣಪತ್ರ ಸಲ್ಲಿಸಿದ ಬಿಬಿಎಂಪಿ ಆಯುಕ್ತ