ತುಮಕೂರು:ಬಯಲುಸೀಮೆಯ ಕಲ್ಪವೃಕ್ಷ ಕಾಮಧೇನು ಎಂದೇ ಕರೆಸಿಕೊಳ್ಳುವ ಹುಣಸೆಹಣ್ಣಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಗಣನೀಯ ಪ್ರಮಾಣದಲ್ಲಿ ದರ ಕುಸಿದುಹೋಗಿದ್ದು, ರೈತರು ಕಂಗಾಲಾಗಿದ್ದಾರೆ. ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗ್ರಾಮಾಂತರ ಭಾಗದಲ್ಲಿ ಯಥೇಚ್ಚವಾಗಿ ಹುಣಸೆಹಣ್ಣು ಬೆಳೆಯಲಾಗುತ್ತದೆ.
ಹುಣಸೆ ಬೆಳೆಯ ಬೀಜ, ಹಿಪ್ಪೆ, ನಾರು, ತೊಗಟೆ ಸಂಪೂರ್ಣ ಬಳಕೆಗೆ ಉಪಯೋಗಿಸಲ್ಪಡುತ್ತದೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಕೇವಲ 9 ಸಾವಿರ ರೂ. ಲಭಿಸುತ್ತಿದೆ. ಕಳೆದ ವರ್ಷ ಇದೇ ಗುಣಮಟ್ಟದ ಹುಣಸೆಹಣ್ಣು ಕ್ವಿಂಟಲ್ ಗೆ 28 ಸಾವಿರದಿಂದ 30 ಸಾವಿರದವರೆಗೆ ಸಿಗುತ್ತಿತ್ತು.