ತುಮಕೂರು: ಮುಖ್ಯವಾಗಿ ಹೃದಯ, ಶ್ವಾಸಕೋಶ ಆರೋಗ್ಯವಾಗಿಟ್ಟುಕೊಂಡಾಗ ಮಾತ್ರ ಕೊರೊನಾದಂತಹ ಸೋಂಕಿನಿಂದ ಪಾರಾಗಬಹುದು. ಹೀಗಾಗಿ ಜನರು ತಂಬಾಕು ಬಳಕೆಯಿಂದ ದೂರವಿರಬೇಕು ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆ ಮಾತನಾಡಿರುವ ಶ್ರೀಗಳು, ಕೊರೊನಾ ಸೋಂಕು ತಗುಲಿದ ಇತರೆ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಎಷ್ಟೇ ಚಿಕಿತ್ಸೆ ನೀಡಿದ್ರೂ ಅದು ಸಫಲವಾಗುತ್ತಿಲ್ಲ. ತಂಬಾಕು ಸೇವಿಸುತ್ತಿರೋ ಅನೇಕರು ಮಾರಣಾಂತಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಸಿಗರೇಟು ಸೇರಿದಂತೆ ತಂಬಾಕು ಪ್ಯಾಕೇಟ್ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮೂದಿಸಲಾಗಿರುತ್ತದೆ.