ತುಮಕೂರು: ನಗರದಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ತೆರಳಿ ಸೋಂಕಿತರಿಗೆ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.
ಕೋವಿಡ್ ಆರೈಕೆ ಕೇಂದ್ರಗಳಿಗೆ ತೆರಳಿ ಸೋಂಕಿತರಿಗೆ ಧೈರ್ಯ ತುಂಬುತ್ತಿರುವ ಸಿದ್ಧಲಿಂಗ ಶ್ರೀ
ತುಮಕೂರು ನಗರದಲ್ಲಿ ಸಿದ್ದಗಂಗಾ ಮಠ ಸೇರಿದಂತೆ ಮೂರು ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಹೀಗೆ ಸಂಘ ಸಂಸ್ಥೆಗಳು ಸರ್ಕಾರದ ನೆರವಿಗೆ ಬಂದಿರುವುದು ಶ್ಲಾಘನೀಯ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಸೋಂಕಿತರು ಯಾವುದೇ ರೀತಿಯಲ್ಲಿ ಧೃತಿಗೆಡುವ ಅಗತ್ಯವಿಲ್ಲ. ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಮಠ ಮಾನ್ಯಗಳು ಜನರ ನೆರವಿಗೆ ಬರುತ್ತವೆ. ಆರೈಕೆ ಕೇಂದ್ರಗಳಲ್ಲಿ ವೈದ್ಯರ ಸಲಹೆ ಮೇರೆಗೆ ನೀಡಲಾಗುವ ಔಷಧಿಗಳನ್ನು ನಿಯಮಿತವಾಗಿ ಪಡೆದುಕೊಳ್ಳಬಹುದು ಎಂದು ಧೈರ್ಯ ಹೇಳುತ್ತಿದ್ದಾರೆ. ಖಾಸಗಿಯಾಗಿ ತುಮಕೂರು ನಗರದಲ್ಲಿ ಸಿದ್ದಗಂಗಾ ಮಠ ಸೇರಿದಂತೆ ಮೂರು ಕಡೆ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಹೀಗೆ ಸಂಘ ಸಂಸ್ಥೆಗಳು ಸರ್ಕಾರದ ನೆರವಿಗೆ ಬಂದಿರುವುದು ಶ್ಲಾಘನೀಯ ಎಂದರು.
ಕೋವಿಡ್ ಆರೈಕೆ ಕೇಂದ್ರದ ಆವರಣದಲ್ಲಿ ಸೋಂಕಿತರನ್ನು ಸಾಮಾಜಿಕ ಅಂತರದಲ್ಲಿ ಕೂರಿಸಲಾಗುತ್ತಿದೆ. ಕಾಂಪೌಂಡ್ ಹೊರಗಡೆ ನಿಂತು ಸ್ವಾಮೀಜಿ ಮೈಕ್ ಮೂಲಕ ಧೈರ್ಯ ತುಂಬುತ್ತಿದ್ದಾರೆ.