ತುಮಕೂರು: ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸೋತಿದ್ದಕ್ಕೆ ಲೋಕಭಿರಾಮದಲ್ಲಿ ಮಾತನಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಏನ್ರಯ್ಯಾ ಎಲ್ರೂ ಸೇರಿ ನನ್ನನ್ನು ಸೋಲಿಸಿ ಬಿಟ್ರಲ್ಲ. ಅದನ್ನ ರಾಜಕೀಯ ಮಾಡಿ, ರಾಜ್ಯದ ಚರ್ಚೆ ಎನ್ನುವ ರೀತಿಯಲ್ಲಿ ತೆಗೆದುಕೊಂಡು ಹೋಗುವುದು ಬೇಡ ಅನ್ನೋದು ನನ್ನ ಅನಿಸಿಕೆ. ನನಗೆ ಆಶ್ಚರ್ಯ ಆಗುತ್ತೆ, ನಾವು ರಾಜಕಾರಣದಲ್ಲಿ ಒಂದು ಹಂತ ತಲುಪಿದ್ದೀವಿ. ನಾವೇನೇ ಹೇಳಿದ್ರೂ ಜನ ಅದನ್ನ ಸೂಕ್ಷ್ಮ ದೃಷ್ಟಿಯಿಂದ ನೋಡ್ತಾರೆ. ಹಾಗಾಗಿ ನಾವು ಏನೇ ಮಾತಾನಬೇಕಾದರೂ ಯಾವುದೇ ಪಕ್ಷದ ಮುಖಂಡರಿರಲಿ ಅಥವಾ ನಮ್ಮ ಪಕ್ಷದವರೇ ಇರಲಿ. ನನ್ನ ಅನಿಸಿಕೆ ಏನು ಅಂದ್ರೆ ನಮ್ಮ ಮಾತು ಸಂಯಮದಿಂದ ಇರಬೇಕಾಗುತ್ತದೆ ಎಂದರು.