ತುಮಕೂರು :ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿರುವುದನ್ನು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಿಸಿದ ಸಿದ್ದಗಂಗಾ ಮಠದ ಸ್ವಾಮೀಜಿ - Anti Cow Slughter Bill passed in session
ಗೋವುಗಳನ್ನು ಮನೆಯ ಸದಸ್ಯರೆಂದು ಭಾವಿಸಿ ಸಂರಕ್ಷಣೆ ಮಾಡಬೇಕು. ಹಸುವನ್ನು ಚೆನ್ನಾಗಿರುವವರೆಗೂ ದುಡಿಸಿಕೊಂಡು, ಅದರಿಂದ ಪ್ರಯೋಜನ ಪಡೆದುಕೊಂಡು, ಕೊನೆಗಾಲದಲ್ಲಿ ಅದು ನಿಶಕ್ತಿಯಾದಾಗ ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವುದು ತುಂಬಾ ನೋವಿನ ಸಂಗತಿ..
ಈ ಕುರಿತು ಮಾತನಾಡಿದ ಅವರು, ಬಹಳ ದಿನಗಳಿಂದ ಇದರ ಬೇಡಿಕೆ ಇತ್ತು. ಈಗಾಗಲೇ ಅನೇಕ ರಾಜ್ಯಗಳು ಗೋ ಹತ್ಯೆ ನಿಷೇಧ ಮಾಡಿವೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ದೊಡ್ಡ ಅಭಿಲಾಷೆ ಇಟ್ಟುಕೊಂಡು ಗೋಹತ್ಯೆ ನಿಷೇಧ ವಿಧೇಯ ಅಂಗೀಕರಿಸಿದ್ಧಾರೆ. ಇದನ್ನು ಸರ್ಕಾರ ನಿಷೇಧ ಮಾಡಿದೆ ಅನ್ನುವುದಕ್ಕಿಂತಲೂ, ಪ್ರತಿಯೊಬ್ಬ ರೈತರೂ ಈ ಬಗ್ಗೆ ಸ್ವಯಂ ಜಾಗೃತರಾಗಬೇಕು ಎಂದರು.
ಗೋವುಗಳನ್ನು ಮನೆಯ ಸದಸ್ಯರೆಂದು ಭಾವಿಸಿ ಸಂರಕ್ಷಣೆ ಮಾಡಬೇಕು. ಹಸುವನ್ನು ಚೆನ್ನಾಗಿರುವವರೆಗೂ ದುಡಿಸಿಕೊಂಡು, ಅದರಿಂದ ಪ್ರಯೋಜನ ಪಡೆದುಕೊಂಡು, ಕೊನೆಗಾಲದಲ್ಲಿ ಅದು ನಿಶಕ್ತಿಯಾದಾಗ ಬೇರೆ ರೀತಿಯಲ್ಲಿ ವಿಲೇವಾರಿ ಮಾಡುವುದು ತುಂಬಾ ನೋವಿನ ಸಂಗತಿ. ಈ ಸಂಸ್ಕೃತಿ ಕೊನೆಯಾಗಬೇಕು ಎಂದು ಅಭಿಪ್ರಾಯಪಟ್ಟರು.