ತುಮಕೂರು : ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಶ್ರೀಗಳ ಪ್ರತಿಮೆಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕೊರಟಗೆರೆಯ ಎಲ್ಲೆರಾಮಪುರದ ಶ್ರೀ ಹನುಮಂತನಾಥ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಸಿದ್ದಗಂಗಾ ಶ್ರೀಗಳು ಸಮಾಜಕ್ಕೆ ಮಾರ್ಗದರ್ಶರಾಗಿದ್ದರು : ಶ್ರೀ ಹನುಮಂತನಾಥ ಸ್ವಾಮೀಜಿ - kannada news
ಸಿದ್ಧಗಂಗಾ ಶ್ರೀಗಳ ಹುಟ್ಟು ಹಬ್ಬದ ಪ್ರಯುಕ್ತ ತುಮಕೂರು ನಗರದಲ್ಲಿ ಶ್ರೀಗಳ ಪ್ರತಿಮೆಯ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು
ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ
ಇದೆ ವೇಳೆ ಮಾತನಾಡಿದ ಸ್ವಾಮೀಜಿಯವರು, ತುಮಕೂರಿನ ನಾಗರಿಕರು ಅರ್ಥಪೂರ್ಣವಾಗಿ ಶ್ರೀಗಳ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಇಂದು ಬಹಳ ದುಃಖ ದಿನ. ಶ್ರೀಗಳು ಬದುಕಿದರೆ ಅನೇಕರಿಗೆ ಮಾರ್ಗದರ್ಶಕರಾಗಿದ್ದರು, ಅವರ ಹುಟ್ಟುಹಬ್ಬದ ಈ ಕಾರ್ಯಕ್ರಮ ಸಂತೋಷವನ್ನು ನೀಡುತ್ತಿಲ್ಲ, ಅವರ ಆಶೀರ್ವಾದ ಸಮಾಜದ ಮೇಲೆ ಯಾವಾಗಲೂ ಇರುತ್ತದೆ ಎಂದು ಭಾವಿಸುತ್ತೇನೆ ಎಂದರು.
ಮೆರವಣಿಗೆಯಲ್ಲಿ ನಾಸಿಕ್ ಡೋಲ್, ಪೂಜಾ ಕುಣಿತ, ಗೊಂಬೆ ಕುಣಿತ, ನಂದಿ ಧ್ವಜ, ವೀರಗಾಸೆ, ಪಟ್ಟದ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.