ತುಮಕೂರು:ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಠದ ಮಕ್ಕಳೊಂದಿಗೆ ಕೆಲಕಾಲ ಮಠದ ಅಂಗಳದಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.
ಕ್ರಿಕೆಟ್ ಆಡಿದ ಸಿದ್ದಗಂಗಾ ಮಠದ ಸ್ವಾಮೀಜಿ..! - Siddaganga Mutt
ಕಾವಿತೊಟ್ಟ ಸ್ವಾಮೀಜಿಯೊಬ್ಬರು ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಮಿಂಚಿದರು. ಎದುರಿಗೆ ಬಂದ ಬಾಲ್ ಬೌಂಡರಿ ಹೊರಗೆ ಅಟ್ಟುವ ಮೂಲಕ ತಾವೂ ಓರ್ವ ಉತ್ತಮ ಕ್ರೀಡಾಪಟು ಎಂದು ತೋರಿಸಿಕೊಟ್ಟರು.

ಶ್ರೀ ಸಿದ್ದಲಿಂಗ ಸ್ವಾಮೀಜಿ
ಸಿದ್ದಲಿಂಗ ಸ್ವಾಮೀಜಿಗಳು ಮಕ್ಕಳ ಬೌಲಿಂಗ್ಗೆ ಸಿಕ್ಸ್ ಹೊಡೆಯುವ ಮೂಲಕ ತಾವೂ ಓರ್ವ ಉತ್ತಮ ಕ್ರೀಡಾಪಟು ಎಂದು ತೋರಿಸಿಕೊಟ್ಟರು. ಸ್ವಾಮೀಜಿ ಬ್ಯಾಟ್ ಹಿಡಿದು ಬಾಲ್ ಬೌಂಡರಿ ಹೊರಗೆ ಅಟ್ಟುತ್ತಿದ್ದಂತೆ ಮಠದ ಮಕ್ಕಳು ಕುಣಿಯತೊಡಗಿದರು.
ಪ್ರಪಂಚದಾದ್ಯಂತ ವಿಶ್ವಕಪ್ ಕ್ರಿಕೆಟ್ ಜ್ವರ ಜೋರಾಗಿದ್ದು, ಸ್ವಾಮೀಜಿಯೊಬ್ಬರು ಬ್ಯಾಟ್ ಹಿಡಿದು ಅಂಗಳಕ್ಕೆ ಇಳಿದಿದ್ದು, ಕ್ರೀಡಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದೆ ಅಂದ್ರೆ ತಪ್ಪಾಗಲಾರದು.
ಮಠದ ಅಂಗಳದಲ್ಲಿ ಕಾಣಿಸಿಕೊಂಡ ಸ್ವಾಮೀಜಿ
ಶ್ರೀಗಳು ಸಿಕ್ಸ್ ಹೊಡೆದಾಗ ಮಕ್ಕಳು ಚಪ್ಪಾಳೆ ತಟ್ಟುತ್ತಿರುವುದು