ತುಮಕೂರು: ಯಡಿಯೂರಪ್ಪ ಅವರನ್ನು ಸರ್ಕಾರದಿಂದ ಇಳಿಸುವುದು ಸೂಕ್ತವಲ್ಲ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಶಸ್ವಿ ನಾಯಕ. ಯಾವಾಗ ಯಡಿಯೂರಪ್ಪ ಅಧಿಕಾರಕ್ಕೆ ಬಂದರೋ ಅಂದಿನಿಂದ ಕುಗ್ಗದೇ ಕೆಲಸ ಮಾಡಿದ್ದಾರೆ ಎಂದು ತುಮಕೂರು ಗ್ರಾಮಾಂತರ ತಾಲೂಕಿನ ಬೆಳ್ಳಾವಿ ಮಠದ ಕಾರದ ಮಠದ ಶ್ರೀಕಾರದವೀರಬಸವ ಸ್ವಾಮೀಜಿ ಹೇಳಿದ್ದಾರೆ.
ಕಳೆದ ಬಾರಿ 15ಕ್ಕೂ ಹೆಚ್ಚು ಸ್ವಾಮೀಜಿಗಳ ಜೊತೆ ಸಭೆ ನಡೆಸಿ ಬಿಎಸ್ವೈಗೆ ಬೆಂಬಲ ನೀಡಿದ್ದ ಕಾರದ ಮಠದ ಸ್ವಾಮೀಜಿ, ಯಡಿಯೂರಪ್ಪ ಜೊತೆ ನಾವೆಲ್ಲ ಇದ್ದೇವೆ. ಅವರನ್ನ ರಕ್ಷಣೆ ಮಾಡುತ್ತೇವೆ. ಯಡಿಯೂರಪ್ಪ ಕೆಳಗಿಳಿಸಿದರೆ ಬಿಜೆಪಿ ಪಕ್ಷ ಸರ್ವನಾಶ ಆಗುತ್ತದೆ ಎಂದರು.