ಪಾವಗಡ (ತುಮಕೂರು): ವಿಶ್ವದ ಬೃಹತ್ ಸೌರ ಶಕ್ತಿ ಕೇಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಹುಲ್ಲಿಗೆ ಬೆಂಕಿ ತಗುಲಿ ಒಂದು ಕಾರು, ಬೈಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸೌರ ಫಲಕಗಳು ಸುಟ್ಟು ಹೋದ ಘಟನೆ ನಡೆದಿದೆ.
ಪಾವಗಡ ತಾಲೂಕಿನ ತಿರುಮಣಿ ಸೋಲಾರ್ ಪಾರ್ಕ್‍ನ 37ನೇ ಬ್ಲಾಕ್‍ನಲ್ಲಿ ವಿದ್ಯುತ್ ಪೂರೈಕೆಯಾಗುವ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದ ಪಾರ್ಕ್‍ನಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿ ಎಲ್ಲೆಡೆ ಹರಡಿದೆ. ಪರಿಣಾಮ ಬ್ಲಾಕ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೌರ ಫಲಕಗಳು, ಒಂದು ಕಾರು ಹಾಗೂ ದ್ವಿಚಕ್ರ ವಾಹನ ಸುಟ್ಟು ಕರಕಲಾಗಿವೆ.