ಕರ್ನಾಟಕ

karnataka

ETV Bharat / state

ನೀರಿನ ಪೈಪ್​ಲೈನ್​ ಕಾಮಗಾರಿ ಮಾಡುವ ವೇಳೆ ಪುರಾತನ ಶಿವಲಿಂಗ ಪತ್ತೆ - ಐತಿಹಾಸಿಕ ಸ್ಥಳ ನಿಡಗಲ್ ದುರ್ಗ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕೆ.ಟಿ. ಹಳ್ಳಿ ಗ್ರಾಮದ ಕಣಿವೆ ಸಿದ್ದಪ್ಪನ ದೇವಾಲಯದ ಸಮೀಪದಲ್ಲಿ ಬೃಹತ್ ಗಾತ್ರದ ಶಿವನ ವಿಗ್ರಹ ಪತ್ತೆಯಾಗಿದೆ.

ಶಿವನ ವಿಗ್ರಹ ಪತ್ತೆ

By

Published : Nov 8, 2019, 10:27 PM IST

ತುಮಕೂರು:ಪಾವಗಡ ತಾಲೂಕಿನ ಬಹುದಿನಗಳ ಹೋರಾಟ ಫಲವಾದ ತುಂಗಭದ್ರಾ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಮಾಡುವ ವೇಳೆ ಕೆ.ಟಿ. ಹಳ್ಳಿ ಗ್ರಾಮದ ಕಣಿವೆ ಸಿದ್ದಪ್ಪನ ದೇವಾಲಯದ ಸಮೀಪದಲ್ಲಿ ಬೃಹತ್ ಗಾತ್ರದ ಶಿವನ ವಿಗ್ರಹ ಪತ್ತೆಯಾಗಿದೆ.

ಐತಿಹಾಸಿಕ ಸ್ಥಳ ನಿಡಗಲ್ ದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ದೇವಾಲಗಳಿವೆ. ಹಲವು ದೇವಾಲಯಗಳ ವಿಗ್ರಹಗಳು ನಿಧಿಗಳ್ಳರ ಹಾವಳಿಯಿಂದ ಧ್ವಂಸವಾಗುತ್ತಿವೆ. ಈ ಬೆನ್ನಲ್ಲೇ ಸಾವಿರಾರು ವರ್ಷಗಳಿಂದ ಭೂಮಿಯಲ್ಲಿ ನೆಲೆಸಿರುವ ಶಿವಲಿಂಗ ಜನಸಾಮಾನ್ಯರಿಗೆ ದರ್ಶನ ನೀಡಿದ್ದು ಸಂತಸ ತಂದಿದೆ.

ಶಿವನ ವಿಗ್ರಹ ಪತ್ತೆ

ಇಲ್ಲಿ ಆಳ್ವಿಕೆ ನಡೆಸಿದ ರಾಜಪರಂಪರೆಯ ಪ್ರತೀಕವಾಗಿ ಸ್ಥಾಪಿಸಿರುವ ದೇವಾಲಯಗಳೇ ಅಂದಿನ ಆಳ್ವಿಕೆಯ ಇತಿಹಾಸ ಸಾರುತ್ತಿವೆ. ಭಕ್ತಿಯ ಪ್ರತೀಕವಾದ ಶಿವಲಿಂಗವನ್ನು ತಾಲೂಕು ಆಡಳಿತ ನಿಡಗಲ್ ದುರ್ಗದಲ್ಲಿ ಪ್ರತಿನಿಧಿಸುವ ಮೂಲಕ ಇಲ್ಲಿನ ದೇವಾಲಯಗಳನ್ನು ಉಳಿಸುವ ಪ್ರಯತ್ನ ಮಾಡಬೇಕೆಂಬುದು ನಿಡಗಲ್ ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದೆ.

ABOUT THE AUTHOR

...view details