ಕರ್ನಾಟಕ

karnataka

ETV Bharat / state

ಕಳಪೆ ಆಹಾರ ಆರೋಪ, ಇಂದಿರಾ ಕ್ಯಾಂಟೀನ್‌ಗೆ ತೆರಳಿ ಪರಿಶೀಲಿಸಿದ ಶಿರಾ ತಹಶೀಲ್ದಾರ್ - ಶಿರಾ ತಹಶೀಲ್ದಾರ್ ಮಮತ ಭೇಟಿ

ಇಂದಿರಾ ಕ್ಯಾಂಟೀನ್ ಸ್ವಚ್ಛತೆ ಮತ್ತು ಆಹಾರ ಗುಣಮುಟ್ಟ ಕಾಪಾಡುವಂತೆ ಸೂಚನೆ ನೀಡಿದ ಅವರು ನಾನು ದಿನ ಊಟಕ್ಕೆ ಬರುತ್ತೇನೆ ಗುಣಮಟ್ಟ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದರು..

shira-taluk-tahsildar
ಶಿರಾ ತಹಶೀಲ್ದಾರ್

By

Published : May 15, 2021, 5:19 PM IST

ತುಮಕೂರು :ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತದೆ ಎಂಬ ದೂರಿನ ಮೇರೆಗೆ ಶಿರಾ ತಹಶೀಲ್ದಾರ್, ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ತೆರಳಿ ಪರಿಶೀಲಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದ ಶಿರಾ ತಹಶೀಲ್ದಾರ್..

ಓದಿ: ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್: ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ

ಸರ್ಕಾರ 14 ದಿನಗಳ ಕಾಲ ಉಚಿತ ಊಟ ಘೋಷಣೆ ಮಾಡಿದ್ದು, ಹಲವೆಡೆ ಕಳಪೆ ಗುಣಮಟ್ಟದ ಆಹಾರ ವಿತರಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶಿರಾ ತಹಶೀಲ್ದಾರ್ ಮಮತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದಿರಾ ಕ್ಯಾಂಟೀನ್ ಸ್ವಚ್ಛತೆ ಮತ್ತು ಆಹಾರ ಗುಣಮುಟ್ಟ ಕಾಪಾಡುವಂತೆ ಸೂಚನೆ ನೀಡಿದ ಅವರು ನಾನು ದಿನ ಊಟಕ್ಕೆ ಬರುತ್ತೇನೆ ಗುಣಮಟ್ಟ ಕಾಪಾಡಬೇಕು ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details