ಕರ್ನಾಟಕ

karnataka

ETV Bharat / state

ಜಿ. ಟಿ ದೇವೇಗೌಡರು ಪಕ್ಷವನ್ನು ’ಬಿಟ್ಟರೆ ಬಿಡಬಹುದು’: ಶಾಸಕ ಸತ್ಯನಾರಾಯಣ - ಹೋಗುವವರಿಗೆ ನಾವು ತಡೆಯುವುದಿಲ್ಲ

ಜಿ. ಟಿ ದೇವೇಗೌಡರು ಪಕ್ಷವನ್ನು ಬಿಟ್ಟರೆ ಬಿಡಬಹುದು, ಕೆಟ್ಟರೆ ಕೆಡಬಹುದು ಅದು ಅವರಿಗೆ ಬಿಟ್ಟ ವಿಚಾರ ಎಂದು ತುಮಕೂರಿನ ಶಿರಾ ಶಾಸಕ ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿ. ಟಿ ದೇವೇಗೌಡ ಅವರು ಪಕ್ಷವನ್ನು ಬಿಟ್ಟರೆ ಬಿಡಬಹುದು

By

Published : Sep 25, 2019, 9:41 PM IST

ತುಮಕೂರು: ಜಿ.ಟಿ ದೇವೇಗೌಡ ಅವರು ಪಕ್ಷವನ್ನು ಬಿಟ್ಟರೆ ಬಿಡಬಹುದು, ಕೆಟ್ಟರೆ ಕೆಡಬಹುದು ಅದು ಅವರಿಗೆ ಬಿಟ್ಟ ವಿಚಾರ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರುವುದು ಹೋಗುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಹೋಗುವವರಿಗೆ ನಾವು ತಡೆಯುವುದಿಲ್ಲ ಎಂದು ತುಮಕೂರಿನಲ್ಲಿ ಶಾಸಕ ಸತ್ಯನಾರಾಯಣ ಹೇಳಿದ್ರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹುಟ್ಟು-ಸಾವು, ಸಾವು-ಹುಟ್ಟು ನಡೆಯುತ್ತಲೇ ಇರುತ್ತದೆ. ಅದೇ ರೀತಿ ನಮ್ಮ ಪಕ್ಷವೂ ಸಹ, ಈಗಿನ ಪರಿಸ್ಥಿತಿಯಲ್ಲಿ ಉತ್ತಮವಾಗಿಲ್ಲ ಅದನ್ನು ಬಲಿಷ್ಠಗೊಳಿಸಲು ಮಾಜಿ ಪ್ರಧಾನಮಂತ್ರಿ ದೇವೇಗೌಡರವರು ಹಿರಿಯ ವಯಸ್ಸಿನಲ್ಲಿಯೂ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ತನ್ನ ಪ್ರಾಬಲ್ಯ ಸಾಬೀತು ಪಡಿಸುವ ಮೂಲಕ ಎದ್ದು ನಿಲ್ಲಲಿದೆ ಎಂದರು.

ಜಿ. ಟಿ ದೇವೇಗೌಡರು ಪಕ್ಷವನ್ನು ಬಿಟ್ಟರೆ ಬಿಡಬಹುದು

ಇದೇ ವೇಳೆ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್​. ಸಿ ಅಂಜನಪ್ಪ , ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಇದೇ ಅಕ್ಟೋಬರ್ 3ರಂದು ತುಮಕೂರಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಕಾರ್ಯಕರ್ತರೊಂದಿಗೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಿದ್ದಾರೆ. ಇದರ ಜೊತೆಗೆ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆ ಇದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗವಹಿಸುವರು ಎಂದರು.

ABOUT THE AUTHOR

...view details