ಕರ್ನಾಟಕ

karnataka

ETV Bharat / state

ಶಿರಾ ಉಪಚುನಾವಣೆ: ಕೊರೊನಾ ಸೋಂಕಿತ ಮಹಿಳೆಯಿಂದ ಮತದಾನ - Corona infected woman vote in by-election

ಶಿರಾ ನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 177ರಲ್ಲಿ ಸೋಂಕಿತ ಮಹಿಳೆಯೊಬ್ಬರು ಮತದಾನ ಮಾಡಿದರು. ಈ ವೇಳೆ ಚುನಾವಣಾ ಸಿಬ್ಬಂದಿಗಳು ಪಿಪಿಇ ಕಿಟ್​ಗಳನ್ನು ಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರೆಸಿದರು.

by-election
ಉಪಚುನಾವಣೆ

By

Published : Nov 3, 2020, 6:07 PM IST

ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 71 ಮಂದಿ ಕೊರೊನಾ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ವೇಳೆ ಚುನಾವಣಾ ಸಿಬ್ಬಂದಿಗಳು ಪಿಪಿಇ ಕಿಟ್​ಗಳನ್ನು ಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರೆಸಿದರು.

ಸೋಂಕಿತ ಮಹಿಳೆಯಿಂದ ಮತದಾನ

ಕೋವಿಡ್‌ ರೋಗಿಗಳು ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕಿನಿಂದ ವಂಚಿತರಾಗಬಾರದು ಎಂಬ ಕಾರಣದಿಂದಾಗಿ ಮತದಾನ ಮಾಡುವುದಕ್ಕೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಶಿರಾ ನಗರದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 177ರಲ್ಲಿ ಸೋಂಕಿತ ಮಹಿಳೆಯೊಬ್ಬರು ಮತದಾನ ಮಾಡಿದರು.

ABOUT THE AUTHOR

...view details