ಕರ್ನಾಟಕ

karnataka

ETV Bharat / state

ಶಿರಾ ಉಪ ಕದನ: ರೆಡ್​ ಕಾರ್ಪೆಟ್ ಹಾಸಿ ಮತದಾರರನ್ನು ಸ್ವಾಗತಿಸಿದ ಚುನಾವಣಾ ಸಿಬ್ಬಂದಿ - Shira by election latest update

ಶಿರಾ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗಿದೆ. ಇತ್ತ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಶಿರಾ ನಗರದ ಹೊರವಲಯದಲ್ಲಿರುವ ತಮ್ಮ ಪತಿ ಸಮಾಧಿಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು.

Shira by-election
ಶಿರಾ ಉಪಚುನಾವಣೆ..ರೆಡ್​ ಕಾರ್ಪೆಟ್ ಹಾಸಿ ಮತದಾರರನ್ನು ಬರಮಾಡಿಕೊಂಡ ಸಿಬ್ಬಂದಿ

By

Published : Nov 3, 2020, 8:28 AM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ನಡೆಯುತ್ತಿರುವ ಮತದಾನದ ವೇಳೆ 175ನೇ ಬೂತ್ ನಂಬರ್​​ನಲ್ಲಿ ಮತದಾರರಿಗೆ ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಳ್ಳಲಾಯಿತು.

ಶಿರಾ ಉಪಚುನಾವಣೆ..ರೆಡ್​ ಕಾರ್ಪೆಟ್ ಹಾಸಿ ಮತದಾರರನ್ನು ಬರಮಾಡಿಕೊಂಡ ಸಿಬ್ಬಂದಿ..

ಮಾದರಿ ಮತಗಟ್ಟೆಯಿಂದ ತೆರೆಯಲಾಗಿರುವ ಬೂತ್​ನಲ್ಲಿ ಮತದಾರರಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬರುವಂತೆ ಸೂಚಿಸಲಾಯಿತು. ಶಿರಾ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗಿದೆ.

ಪತಿ ಸಮಾಧಿಗೆ ಪೂಜೆ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಯಿಂದ ಪತಿ ಸಮಾಧಿಗೆ ಪೂಜೆ:ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ತಮ್ಮ ಪತಿ ಸತ್ಯನಾರಾಯಣ ಸಮಾಧಿಗೆ ನಮನ ಸಲ್ಲಿಸಿದರು. ಶಿರಾ ನಗರದ ಹೊರವಲಯದಲ್ಲಿರುವ ಸಮಾಧಿಗೆ ತೆರಳಿದ ಅಮ್ಮಜಮ್ಮ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು.

ABOUT THE AUTHOR

...view details